Monday, December 23, 2024

ಜೋಕಾಲಿ ಆಡಲು ಹೋಗಿ ಪ್ರಾಣ ಕಳೆದುಕೊಂಡ 9ರ ಬಾಲಕಿ

ಹಾಸನ : ಜೋಕಾಲಿ ಆಡುತ್ತಿರುವಾಗ ಸೀರೆ ಕುತ್ತಿಗೆಗೆ ಸಿಕ್ಕಿಹಾಕಿಕೊಂಡು ಬಾಲಕಿಯೊಬ್ಬಳು ಸಾವನ್ನಪ್ಪಿರುವ ದಾರುಣ ಘಟನೆ ಹಾಸನದಲ್ಲಿ ನಡೆದಿದೆ.

ಜಿಲ್ಲೆಯ ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿ ಕುಣಿಕೇರಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. 4ನೇ ತರಗತಿ ವಿದ್ಯಾರ್ಥಿನಿ ಸಾನಿತ (9) ಮೃತಪಟ್ಟ ಬಾಲಕಿ.

ಮೃತ ಬಾಲಕಿ ಕುಣಿಕೇರಿಯ ಬಸವರಾಜು ಹಾಗೂ ಬೇಬಿ ದಂಪತಿಯ ಒಬ್ಬಳೇ ಪುತ್ರಿ. ಮನೆಯ ಒಳಗೆ ಪೋಷಕರು ಬಾಲಕಿ ಆಡಲು ಸೀರೆಯಲ್ಲಿ ಜೋಕಾಲಿ ಕಟ್ಟಿದ್ದರು. ಸಾನಿತ ಜೋಕಾಲಿ ಆಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾಳೆ. ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು ಮೃತಪಟ್ಟಿದ್ದಾಳೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES