Monday, December 23, 2024

ಆ.21ರಿಂದ ದ್ವಿತೀಯ ಪಿಯು 2ನೇ ಪೂರಕ ಪರೀಕ್ಷೆ ಆರಂಭ!

ಬೆಂಗಳೂರು: ದ್ವಿತೀಯ ಪಿಯುಸಿ 2ನೇ ಪೂರಕ ಪರೀಕ್ಷೆಯು ಆಗಸ್ಟ್ 21 ರಿಂದ ಆರಂಭವಾಗಲಿದೆ. ಉಪನ್ಯಾಸಕರ ವಿರೋಧದ ನಡುವೆಯೇ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಎರಡು ಪೂರಕ ಪರೀಕ್ಷೆ ನಡೆಸಲು ನಿರ್ಧರಿಸಿದೆ.

ಇದನ್ನೂ ಓದಿ: ಮೊಹರಂ ಹಿನ್ನೆಲೆ ಇಂದು ನಗರದ ಹಲವೆಡೆ ರಸ್ತೆ ಸಂಚಾರ ಬದಲಾವಣೆ!

ಪ್ರಸಕ್ತ ಸಾಲಿನಲ್ಲಿ ಈಗಾಗಲೆ ಮೊದಲ ಪೂರಕ ಪರೀಕ್ಷೆ ಮುಗಿದಿರುವುದರಿಂದ ಇದೀಗ 2 ನೇ ಪೂರಕ ಪರೀಕ್ಷೆಗೆ ಶುಕ್ರವಾರ ವೇಳಾಪಟ್ಟಿ ಪ್ರಕಟಿಸಿದೆ. ಆ.21 ರಿಂದ ಸೆ.2 ರವರೆಗೆ ಪೂರಕ ಪರೀಕ್ಷೆ-2 ನಡೆಸಲು ನಿರ್ಧರಿಸಲಾಗಿದೆ. ಬಹುತೇಕ ಎಲ್ಲ ಪರೀಕ್ಷೆಗಳು ಮಧ್ಯಾಹ್ನ 2.15 ರಿಂದ 5.30ರವರೆಗೆ ನಡೆಯಲಿವೆ.

2022-23ನೇ ಸಾಲಿನಲ್ಲಿ ಹಾಗೂ ಅದಕ್ಕೂ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ನೋಂದಾಯಿಸಿಕೊಂಡು ಪರೀಕ್ಷೆ ಬರೆಯಬಹುದು. ಆ.10 ನೋಂದಣಿಗೆ ಕೊನೆಯ ದಿನವಾಗಿದ್ದು ಆಸಕ್ತರು ತಮ್ಮ ಕಾಲೇಜುಗಳಿಗೆ ತೆರಳಿ ನೋಂದಣಿ ಮಾಡಿಸಬಹುದಾಗಿದೆ.

RELATED ARTICLES

Related Articles

TRENDING ARTICLES