Sunday, January 19, 2025

ಮೊಹರಂ ಹಿನ್ನೆಲೆ ಇಂದು ನಗರದ ಹಲವೆಡೆ ರಸ್ತೆ ಸಂಚಾರ ಬದಲಾವಣೆ!

ಬೆಂಗಳೂರು: ಮುಸ್ಲಿಂ ಬಾಂಧವರ ಮೊಹರಂ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಟ್ರಾಫಿಕ್​ ಪೊಲೀಸರು ನಗರದ ಕೆಲ ರಸ್ತೆಗಳಲ್ಲಿ ಶನಿವಾರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4.30ರವರೆಗೆ ವಾಹನಗಳ ಸಂಚಾರದಲ್ಲಿ ಬದಲಾವಣೆ ಮಾಡಿದ್ದಾರೆ.

ಇದನ್ನೂ ಓದಿ: 10 ಕೋಟಿ ಲಾಟರಿ ಗೆದ್ದ 11 ಪೌರಕಾರ್ಮಿಕ ಮಹಿಳೆಯರು!

ಬ್ರಿಗೇಡ್ ರಸ್ತೆ ಮುಖಾಂತರ ಹೊಸೂರು ರಸ್ತೆ ಕಡೆಗೆ ವೆಲ್ಲಾರಾ ಜಂಕ್ಷನ್‌ ಮುಖಾಂತರ ತೆರಳುವ ಸವಾರರು-ರಿಚ್ಮಂಡ್ ರಸ್ತೆಯ ಮೂಲಕ ರೀನಿಯಸ್ ಕ್ರಾಸ್, ನಂಜಪ್ಪ ವೃತ್ತ, ಲಾಂಗ್ ಫೋರ್ಡ್ ರಸ್ತೆ, ಸಿಎಂಪಿ ಜಂಕ್ಷನ್‌ ಮೂಲಕ ಸಂಚರಿಸಬೇಕು.

ಹೊಸೂರು ರಸ್ತೆ ಆಡುಗೋಡಿ ಕಡೆಯಿಂದ ಬರುವ ಸವಾರರು – ಸಿಮೆಂಟ್ರಿ ಕ್ರಾಸ್, ಬರ್ಲಿ ಸ್ಟ್ರೀಟ್, ಲಾಂಗ್ ಪೋರ್ಡ್ ರಸ್ತೆ, ನಂಜಪ್ಪ ವೃತ್ತ, ರೀನಿಯಸ್ ಸ್ಟ್ರೀಟ್ ಮೂಲಕ ರಿಚ್ಮಂಡ್ ರಸ್ತೆಗೆ ಬಂದು ಮುಂದಕ್ಕೆ ಸಂಚರಿಸಬೇಕು.

ಹೊಸೂರು ರಸ್ತೆ ಕಡೆಯಿಂದ ಬರುವ ಭಾರೀ ವಾಹನಗಳ ಸವಾರರು – ಆಡುಗೋಡಿ ಜಂಕ್ಷನ್, ಮೈಕೋ ಜಂಕ್ಷನ್, 8ನೇ ಮೈನ್, ವಿಲ್ಸನ್ ಗಾರ್ಡನ್ ಮುಖ್ಯ ರಸ್ತೆ, ಸಿದ್ದಯ್ಯ ರಸ್ತೆಗೆ ಬಂದು ಮುಂದಕ್ಕೆ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES