Wednesday, January 22, 2025

ನಟ ಕಿಚ್ಚನ ಮೇಲೆ ಹುಚ್ಚು ಅಭಿಮಾನ: ರಕ್ತದಲ್ಲೇ ಸುದೀಪ್ ಚಿತ್ರ ಬಿಡಿಸಿದ ಫ್ಯಾನ್​

ಬೆಂಗಳೂರು : ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್​ ಮೇಲಿನ ಹುಚ್ಚು ಅಭಿಮಾನದಿಂದ ಮಹಿಳಾ ಫ್ಯಾನ್​ ಒಬ್ಬರು ರಕ್ತದಲ್ಲೇ ಸುದೀಪ್​ ಭಾವಚಿತ್ರ ಬಿಡಿಸಿದ ಅಭಿಮಾನ ಮೆರಿದ್ದಾರೆ.

ಇದನ್ನೂ ಓದಿ: ಆ.21ರಿಂದ ದ್ವಿತೀಯ ಪಿಯು 2ನೇ ಪೂರಕ ಪರೀಕ್ಷೆ ಆರಂಭ!

ಶಿವಮೊಗ್ಗ ಮೂಲದ ಅಭಿಮಾನಿ ವೈಷ್ಣವಿ, ನಟ ಸುದೀಪ್​ ಮೇಲಿನ ಅಭಿಮಾನಕ್ಕೆ ವೈದ್ಯರ ನೆರವಿನಿಂದ ತಮ್ಮ ದೇಹದಿಂದ ರಕ್ತವನ್ನು ಹೊರತೆಗೆದು ರಕ್ತದಲ್ಲೇ ಸುದೀಪ್​ ಭಾವಚಿತ್ರವನ್ನು ಬಿಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ರಕ್ತದಲ್ಲಿ ಬಿಡಿಸಿರುವ ಭಾವಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಅಭಿಮಾನಿ ವೈಷ್ಣವಿ ದೃಶ್ಯ ನೋಡಿದ ನಟ ಸುದೀಪ್​, ಧನ್ಯವಾದ ಎಂದು ಕಮೆಂಟ್ ಮಾಡಿದ್ದಾರೆ. ವೈಷ್ಣವಿ ಅಭಿಮಾನಕ್ಕೆ ಸಾಕಷ್ಟು ಜನರ ಮೆಚ್ಚುಗೆ ವ್ಯಕ್ತಪಡಿಸಿದ್ದರೇ, ಇನ್ನೂ ಕೆಲವರು, ಅಭಿಮಾನಿ ಪೋಸ್ಟ್​ಗೆ  ಸುದೀಪ್‌ ಧನ್ಯವಾದ ತಿಳಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES