Wednesday, January 22, 2025

ಬಿಜೆಪಿ ಪಾರ್ಟಿ ಆಡಳಿತಾತ್ಮಕ ಬದಲಾವಣೆ: ಸಿ.ಟಿ ರವಿಗೆ ಕೋಕ್!

ನವದೆಹಲಿ : ಭಾರತೀಯ ಜನತಾ ಪಕ್ಷವು ಆಡಳಿತಾತ್ಮಕ ಬದಲಾವಣೆ ಮಾಡಿದೆ. ಪಕ್ಷದ ಕೇಂದ್ರ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕರ್ನಾಟಕದ ಸಿ.ಟಿ ರವಿ ಅವರಿಗೆ ಕೊಕ್ ನೀಡಿದೆ.

ಇದನ್ನೂ ಓದಿ: ಸೀಟ್​ ವಿಚಾರಕ್ಕೆ ಜಗಳ: ಕರ್ನಾಟಕದ ಪ್ರಯಾಣಿಕರಿಗೆ ಥಳಿತ!

ಲೋಕಸಭೆ ಮತ್ತು ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಪಕ್ಷದ ಆಡಳಿತಾತ್ಮಕ ಬದಲಾವಣೆ ಮಹತ್ವ ಪಡೆದುಕೊಂಡಿದೆ. ಹೊಸದಾಗಿ 13 ನಾಯಕರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಬಿ.ಎಲ್. ಸಂತೋಷ್ ಅವರನ್ನು ಮುಂದುವರೆಸಲಾಗಿದೆ.

ತೆಲಂಗಾಣದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಬಂಡಿ ಸಂಜಯ್ ಅವರನ್ನು ಇತ್ತೀಚೆಗೆ ತೆಲಂಗಾಣದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಲಾಗಿತ್ತು.

ಸದ್ಯ ಬಿಜೆಪಿ ಹೈಕಮಾಂಡ್​ ನ ಈ ನಿರ್ಧಾರವು ಮುಂಬರಲಿರುವ ಚುನಾವಣೆಗಳ ಮೆಲೆ ಯಾವ ರೀತಿಯ ಪರಿಣಾಮಗಳು ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

RELATED ARTICLES

Related Articles

TRENDING ARTICLES