Wednesday, January 22, 2025

ತಡವಾಗಿ ಬಂದ ರಾಜ್ಯಪಾಲ ಗೆಹ್ಲೋಟ್​ರನ್ನೇ ಬಿಟ್ಟು ಹಾರಿದ ವಿಮಾನ! : ಏರ್‌ಏಷ್ಯಾ ವಿರುದ್ಧ ಕ್ರಮಕ್ಕೆ ಸೂಚನೆ

ಬೆಂಗಳೂರು : ವಿಮಾನ ನಿಲ್ದಾಣಕ್ಕೆ ತುಸು ತಡವಾಗಿ ಆಗಮಿಸಿದರು ಎಂಬ ಕಾರಣಕ್ಕೆ ಹೈದರಾಬಾದ್‌ಗೆ ಪ್ರಯಾಣಿಸಬೇಕಿದ್ದ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್ ಅವರನ್ನು ಬಿಟ್ಟು ಏರ್ ಏಷ್ಯಾ ವಿಮಾನವು ಪ್ರಯಾಣ ಬೆಳೆಸಿದ ಘಟನೆ ಕೆಂಪೇಗೌಡ ವಿಮಾನನಿಲ್ದಾಣ ದಲ್ಲಿ ಗುರುವಾರ ನಡೆದಿದೆ.

ಇದನ್ನೂ ಓದಿ: ಕಸದ ಗಾಡಿಯಲ್ಲಿ ರೋಗಿ ಸಾಗಿಸಿ ಅಮಾನವೀಯತೆ!

ಪೂರ್ವನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಹೈದರಾಬಾದ್‌ಗೆ ತೆರಳಲು ಗುರುವಾರ ಮಧ್ಯಾಹ್ನ 2 ಗಂಟೆಗೆ ಹೊರಡುವ ಏರ್ ಏಷ್ಯಾ ವಿಮಾನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರಿಗೆ ಟಿಕೆಟ್ ಬುಕ್ ಆಗಿತ್ತು. ಆದರೆ ವಿಮಾನ ನಿಲ್ದಾಣಕ್ಕೆ ರಾಜ್ಯಪಾಲರು ತಲುಪುವಷ್ಟರಲ್ಲಿ 10 ನಿಮಿಷ ತಡವಾಗಿದೆ. ಅಷ್ಟರಲ್ಲಿ ರಾಜ್ಯಪಾಲರು ಪ್ರಯಾಣಿಸಬೇಕಿದ್ದ ಏರ್ ಏಷ್ಯಾ ವಿಮಾನವು ಗಗನಕ್ಕೆ ಹಾರಿದೆ. ಈ ಘಟನೆಯಿಂದ ತೀವ್ರ ಮುಜುಗರಕ್ಕೊಳಗಾದ ರಾಜ್ಯಪಾಲರು, ರಾಜ್ಯದ ಮೊದಲ ಪ್ರಜೆಯಾದ ತಮಗೆ ಅಗೌರವ ಸೂಚಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಶಿಷ್ಟಾಚಾರ ಉಲ್ಲಂಘಿಸಿದ ಏರ್ ಏಷ್ಯಾ ಸಂಸ್ಥೆ ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ರಾಜಭವನದ ವಿಶೇಷ ಕರ್ತವ್ಯಾಧಿಕಾರಿಗಳಿಗೆ ರಾಜ್ಯಪಾಲರು ಆದೇಶಿಸಿದ್ದಾರೆ. ಇದಾದ ಬಳಿಕ ಮಧ್ಯಾಹ್ನ 3.30ಕ್ಕೆ ಹೈದರಾಬಾದ್‌ಗೆ ಹೊರಟಿದ್ದ ಬೇರೆ ಏರ್ ಏಷ್ಯಾ ವಿಮಾನದಲ್ಲಿ ರಾಜ್ಯಪಾಲರು ಪ್ರಯಾಣ ಬೆಳೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೂರು ನೀಡಲು ನಿರ್ಧಾರ

ರಾಜ್ಯಪಾಲರ ಸೂಚನೆ ಮೇರೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಲು ಶಿಷ್ಟಾಚಾರ ವಿಭಾಗದ ಅಧಿಕಾರಿಗಳು ಮುಂದಾಗಿದ್ದಾರೆ. ಈ ಸಂಬಂಧ ಗುರುವಾರ ಸಂಜೆ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್‌ರನ್ನು ಭೇಟಿ ಯಾಗಿ ಅಧಿಕಾರಿಗಳು ಸಮಾಲೋಚಿಸಿದ್ದಾರೆ. ಏಪೋರ್ಟ್​ಗೆ ತಲುಪುವುದು ವಿಳಂಬವಾಗುತ್ತಿರುವ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರೂ ಶಿಷ್ಟಾ ಚಾರ ಉಲ್ಲಂಘನೆ ಸಂಬಂಧ ಶಿಷ್ಟಾಚಾರ ವಿಭಾಗದ ಅಧಿಕಾರಿಗಳು ಮೌಖಿಕ ದೂರು ನೀಡಿದ್ದಾರೆ.

RELATED ARTICLES

Related Articles

TRENDING ARTICLES