ವಿಶ್ವಸಂಸ್ಥೆ: ಜಮ್ಮು ಮತ್ತು ಕಾಶ್ಮೀರ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ಗೆ ಭಯೋತ್ಪಾದನೆ ಹರಡುವ ಉದ್ದೇಶದಿಂದ ಭಯೋತ್ಪಾದಕ ಗುಂಪು ಅಲ್ ಕೈದಾ ತನ್ನ ಕಾರ್ಯಾಚರಣೆಗಾಗಿ ಪ್ರಾದೇಶಿಕ ಅಂಗಸಂಸ್ಥೆಯನ್ನು ರೂಪಿಸುತ್ತಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.
ಇದನ್ನೂ ಓದಿ: ನಾಳೆ ಮಣಿಪುರಕ್ಕೆ “ಇಂಡಿಯಾ” ಸಂಸದರ ಭೇಟಿ
ಅಫ್ಘಾನಿಸ್ತಾನದಲ್ಲಿ ಅಲ್-ಕೈದಾ ಸಕ್ರಿಯವಾಗಿದೆ. 400ಕ್ಕೂ ಹೆಚ್ಚು ಉಗ್ರರು, 2,000ಕ್ಕೂ ಹೆಚ್ಚು ಬೆಂಬಲಿಗರು ಇದ್ದಾರೆ ಎಂದು ಅಂದಾಜು ಮಾಡಲಾಗಿದೆ. ಭಾರತದಲ್ಲಿ ಅಲ್-ಕೈದಾ ಸುಮಾರು 200 ಉಗ್ರರನ್ನು ಹೊಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ತಾಲಿಬಾನ್ ಜತೆ ಅಲ್-ಕೈದಾ ನಿಕಟ ಉನ್ನತ ಅಧಿಕಾರಿಗಳ ಅಡಿಯಲ್ಲಿ ಅಲ್-ಕೈದಾ ಸದಸ್ಯರು ಕೆಲಸ ಮಾಡುತ್ತಿದ್ದಾರೆ.
ದೇಶಾದ್ಯಂತ ನೆಲೆ ಭದ್ರ ಪಡಿಸುತ್ತಿದ್ದಾರೆ. ಆದರೆ, ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿ ಮಾಡುವ ಸಾಮರ್ಥ್ಯ ಅದರ ಬಳಿ ಇಲ್ಲ. ಹೊಸ ಹೋರಾಟಗಾರರನ್ನು ಸಜ್ಜುಗೊಳಿಸಲು ಮತ್ತು ನೇಮಕ ಮಾಡಿಕೊಳ್ಳಲು ಅಫ್ಘಾನಿಸ್ತಾನ ಕೇಂದ್ರ ಬಿಂದುವಾಗಿದೆ ಎಂದು ವರದಿ ಉಲ್ಲೇಖಿಸಿದೆ.