Sunday, December 22, 2024

ಬಿಜೆಪಿ ಅವ್ರ ತರ ನಾವು ಕಚಡ ರಾಜಕೀಯ ಮಾಡಲ್ಲ : ರಾಮಲಿಂಗಾರೆಡ್ಡಿ

ಬೆಂಗಳೂರು : ಬಿಜೆಪಿ ಅವ್ರ ತರ ನಾವು ಕಳಪೆ ರಾಜಕೀಯ, ಕಚಡ ರಾಜಕೀಯ ಮಾಡೋದಕ್ಕೆ ಹೋಗಲ್ಲ ಎಂದು ಬಿಜೆಪಿ ವಿರುದ್ಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತ 100 ಪಟ್ಟು ಉತ್ತಮ ಆಡಳಿತ ಮಾಡ್ತಿದೆ ಎಂದು ಛೇಡಿಸಿದರು.

ಬಿಜೆಪಿ ಅವರು ಮತ್ತು ಅವರ ಪರಿವಾರ ಇದೆ. ಅವರದ್ದೇ ವಿಶ್ವವಿದ್ಯಾಲಯ ಇದೆ. ಅದಕ್ಕೆ ವಾಟ್ಸ್​ಆಫ್ ವಿಶ್ವವಿದ್ಯಾಲಯ ಅಂತ ಹೆಸರು. ಸುಳ್ಳನ್ನು ಸೃಷ್ಟಿ ಮಾಡುವವರು. ಹಿಟ್ಲರ್ ಸಂಸ್ಕೃತಿಯವರು. ನಿತ್ಯ ಸುಳ್ಳನ್ನು ಸೃಷ್ಟಿ ಮಾಡಿ ಹೊರ ಬಿಡುತ್ತಾರೆ ಎಂದು ಕುಟುಕಿದರು.

ಉಡುಪಿ ಕಾಲೇಜು ಪ್ರಕರಣದ ಬಗ್ಗೆ ಖುಷ್ಬೂ ಸುಂದರ್ ಹೇಳಿದ್ದಾರೆ. ಅವರು ಬಿಜಿಪಿಯವರು. ಯಾವ ವಿಡಿಯೋನೂ ಇಲ್ಲ. ಶೌಚಾಲಯದಲ್ಲಿ ಯಾವ ಹಿಡನ್ ಕ್ಯಾಮೆರಾ ಇರಲಿಲ್ಲ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಅಂತ ಹೇಳಿದ್ದಾರೆ. ಅವರ ಪಕ್ಷದವರೇ ಹೇಳಿದ್ದಾರೆ. ಆದರೂ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಗುಡುಗಿದರು.

ಇದನ್ನೂ ಓದಿ : ಮುಸ್ಲಿಂ ಮತಕ್ಕೆ ಅಂಜಿ, ಇವ್ರು ಇಷ್ಟು ಕೆಟ್ಟ ಕೆಲಸ ಮಾಡ್ತಿದ್ದಾರೆ : ಗೋವಿಂದ ಕಾರಜೋಳ

30 ರಿಂದ 35 ಸೀಟು ಬರೋಲ್ಲ

ಸುಮ್ ಸುಮ್ಮನೆ ಆರೋಪ ಮಾಡೋದು, ಅಪಪ್ರಚಾರ ಮಾಡೋದು ವಾಟ್ಸ್​ಆಫ್ ಯುನಿವರ್ಸಿಟಿ ಅವರದ್ದು. ಹುಟ್ಟು ಗುಣ ಸುಟ್ಟರೂ ಹೋಗಲ್ಲ. ಆ ರೀತಿಯವರು ಅವ್ರು. ಈಗ 65 ಸ್ಥಾನಕ್ಕೆ ಬಂದ್ರೂ ಬುದ್ದಿ ಬಂದಿಲ್ಲ. ಇದೇ ರೀತಿ ಮಾಡ್ತಾ ಇದ್ರೇ, 30 ರಿಂದ 35 ಸೀಟು ಬರೋಲ್ಲ ಎಂದು ಕಿಡಿಕಾರಿದರು.

ಇದೇ ಚೆಷ್ಟೆಗಳನ್ನು ಮುಂದುವರಿಸಿದ್ರೆ..!

ಅವ್ರು ನೈತಿಕ ಪೊಲೀಸ್ ಗಿರಿ ಮಾಡ್ತಾ ಇದ್ದವರು. ನಾಲ್ಕು ವರ್ಷ ಅದನ್ನೇ ಮಾಡಿದ್ದು. ಹಿಜಾಬ್, ಹಲಾಲ್, ಕ್ಲಬ್​ಗೆ ಹೋಗಿ ಗಲಾಟೆ ಮಾಡೋದು, ಪ್ರೇಮಿಗಳ ದಿನ ಪಾರ್ಕ್​ಗೆ ಹೋಗಿ ಗಲಾಟೆ ಮಾಡೋದು ಇದನ್ನೆಲ್ಲಾ ಮಾಡಿದ್ದು ಬಿಜೆಪಿಯವರು. ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ನೈತಿಕ ಪೊಲೀಸ್ ಗಿರಿ ಮಾಡುವುದಿಲ್ಲ. ಮಾಡುವುದಕ್ಕೂ ಬಿಡಲ್ಲ. ಇದೇ ಚೆಷ್ಟೆಗಳನ್ನು ಮುಂದುವರಿಸಿದ್ರೆ, ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.

RELATED ARTICLES

Related Articles

TRENDING ARTICLES