Monday, December 23, 2024

ಕೆಎಸ್​ಆರ್ಟಿಸಿ ಬಸ್ ಬಾಡಿಗೆ ಭಾರಿ ಹೆಚ್ಚಳ! : ಪ್ರತಿ ಕಿ.ಮೀಟರ್​ ಗೆ 2ರಿಂದ 5 ವರೆಗೆ ಏರಿಕೆ

ಬೆಂಗಳೂರು: ವಿದ್ಯುತ್, ಹಾಲಿನ ದರ ಹೆಚ್ಚಳದ ನಂತರ ಇದೀಗ ಒಪ್ಪಂದದ ಮೇಲೆ ಪಡೆಯಲಾಗುವ ಕೆ ಎಸ್‌ಆರ್‌ಟಿಸಿ ಬಸ್ ಬಾಡಿಗೆ ದರದಲ್ಲೂ ಏರಿಕೆ ಮಾಡಲಾಗಿದೆ.

ಇದನ್ನೂ ಓದಿ: ತಡವಾಗಿ ಬಂದ ರಾಜ್ಯಪಾಲ ಗೆಹ್ಲೋಟ್​ರನ್ನೇ ಬಿಟ್ಟು ಹಾರಿದ ವಿಮಾನ! : ಏರ್‌ಏಷ್ಯಾ ವಿರುದ್ಧ ಕ್ರಮಕ್ಕೆ ಸೂಚನೆ

ರಾಜ್ಯಸರ್ಕಾರದ ಮಹತ್ವದ ಶಕ್ತಿ ಯೋಜನೆ ಹೊರೆ ಭರಿಸಲು ಮುಖ್ಯಮಂತ್ರಿಗಳ ಸೂಚನೆಯಂತೆ ರಾಜ್ಯ ಬೊಕ್ಕಸ ತುಂಬಿಸಲು ಮತ್ತು ಶಕ್ತಿ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಲು ಆದಾಯ ಹೆಚ್ಚಳಕ್ಕೆ ರಾಜ್ಯದ ಪ್ರಮುಖ ಇಲಾಖೆಗಳಿಗೆ ಸೂಚಿಸಿದ ಬೆನ್ನಲ್ಲೇ ಸಾರಿಗೆ ಇಲಾಖೆಯ ಬಸ್​ ದರ ಹೆಚ್ಚಳಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ.

ರಾಜ್ಯ ರಸ್ತೆ ಸಾರಿಗೆಯ 7 ವಿಧದ ಬಸ್‌ಗಳ ದರವನ್ನು ಪ್ರತಿ ಕಿ. ಮೀ.ಗೆ 2 ರು.ನಿಂದ 5 ರು.ವರೆಗೆ ಹೆಚ್ಚಿಸಲಾಗಿದ್ದು, ನೂತನ ದರ ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ರಾಜ್ಯದೊಳಗೆ ಮತ್ತು ಅಂತಾರಾಜ್ಯಕ್ಕೆ ಸಂಚರಿಸಲು ಪಡೆಯಲಾಗುವ ಬಸ್‌ಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ.

ಜತೆಗೆ ಮೈಸೂರು ನಗರದಲ್ಲಿ ಗಂಟೆಗಳ ಆಧಾರದಲ್ಲಿ ಬಸ್‌ಗಳನ್ನು ಒದಗಿಸುವ ವ್ಯವಸ್ಥೆಯನ್ನು ರದ್ದು ಮಾಡಲಾಗಿದೆ. ಆದರ ಬದಲು ಪ್ರತಿದಿನಕ್ಕೆ ನಿಗದಿ ಮಾಡಲಾಗಿರುವ ಕನಿಷ್ಠ ಕಿ.ಮೀ. ದರವನ್ನು ಪಾವತಿಸುವವರಿಗೆ ಬಸ್ ಗಳನ್ನು ಬಾಡಿಗೆಗೆ ನೀಡಲಾಗುತ್ತದೆ ಎಂದು ಕೆಎಸ್ಸಾರ್ಟಿಸಿ ತಿಳಿಸಿದೆ.

RELATED ARTICLES

Related Articles

TRENDING ARTICLES