Saturday, January 4, 2025

ಹರಿಪ್ರಸಾದ್ ಕಾಂಗ್ರೆಸ್​ ಪಕ್ಷದ ನಿಷ್ಠಾವಂತ ಮನುಷ್ಯ : ಕೆ.ಎನ್ ರಾಜಣ್ಣ

ಹಾಸನ : ಬಿ.ಕೆ ಹರಿಪ್ರಸಾದ್ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮನುಷ್ಯ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದರು.

ಬಿ.ಕೆ ಹರಿಪ್ರಸಾದ್ ಅಸಮಾಧಾನ ಕುರಿತು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವ್ರು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳನ್ನು ಇಳಿಸ್ತೀನಿ ಅಂತ ಹೇಳಿದ್ದಾರೆಯೇ? ಎಂದು ಕುಟುಕಿದರು.

ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿದ್ದಾಗ ಬಹಳಷ್ಟು ರಾಜ್ಯಗಳಲ್ಲಿ ವೀಕ್ಷಕರಾಗಿ ಹೋಗಿ ಮುಖ್ಯಮಂತ್ರಿಗಳನ್ನು ಮಾಡಿದ್ದಾರೆ.  ಕಾಂಗ್ರೆಸ್​ನಲ್ಲಿ ಈ ರೀತಿಯ ಗೊಂದಲಗಳಿಗೆ ನಿವಾರಣೆ ಮಾಡಿರುವ ಬಹಳಷ್ಟು ಉದಾಹರಣೆಗಳಿವೆ ಎಂದು ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದರು.

ಇದನ್ನೂ ಓದಿ : ಬಿಜೆಪಿ ಅವ್ರ ತರ ನಾವು ಕಚಡ ರಾಜಕೀಯ ಮಾಡಲ್ಲ : ರಾಮಲಿಂಗಾರೆಡ್ಡಿ

ನಮಗೂ ಕೂಡ ಶಕ್ತಿ ಇದೆ

ಬಿಕೆಹೆಚ್ ಎಐಸಿಸಿ ಮಟ್ಟದಲ್ಲಿ ಅನುಭವ ಗಳಿಸಿರುವಂತಹ ನಾಯಕ. ಅವ್ರು ತಮ್ಮ ಸಮುದಾಯದ ಸಮಾರಂಭದಲ್ಲಿ ಸರ್ಕಾರ ಇಟ್ಕೊಂಡು ನಿಮ್ಮನ್ನು ಮಂತ್ರಿ ಮಾಡಲಿಲ್ಲ ಅಂತ ಹೇಳಿರ್ತಾರೆ. ಆಯ್ತು ಮಂತ್ರಿ ಮಾಡಲಿಲ್ಲ ಅಂದರೆ ಬೇಸರ ಇಲ್ಲ. ನಮಗೂ ಕೂಡ ಶಕ್ತಿ ಇದೆ. ಸರ್ಕಾರಗಳನ್ನು ಅಧಿಕಾರಕ್ಕೆ ತರುವುದು ಗೊತ್ತು, ಬೀಳಿಸೋದು ಗೊತ್ತು ಅಂತ ಹೇಳಿಕೊಂಡಿದ್ದಾರೆ ಎಂದರು.

ಬಿಕೆಹೆಚ್​ ಪರ ರಾಜಣ್ಣ ಬ್ಯಾಟ್

ಹರಿಪ್ರಸಾದ್ ಮಾತಿನಲ್ಲಿ ತಪ್ಪು ಹುಡುಕುವ ಅಗತ್ಯತೆ ಇಲ್ಲ. ನಾನು ಒಂದು ಮಾತನ್ನು ಹೇಳ್ತೀನಿ… ಬಿ.ಕೆ ಹರಿಪ್ರಸಾದ್ ಒಬ್ಬ ಕಾಂಗ್ರೆಸ್​ ಪಕ್ಷದ ನಿಷ್ಠಾವಂತ ಮನುಷ್ಯ. ಯುವ ಕಾಂಗ್ರೆಸ್ ಘಟಕದಲ್ಲಿ ಜನರಲ್ ಸೆಕ್ರೆಟ್ರಿ ಆಗಿ 1979ರಿಂದ ನೋಡಿದ್ದೇನೆ. ಯಾವುದೇ ಕಾರಣಕ್ಕೂ ಪಕ್ಷಕ್ಕೆ ಅನಾನುಕೂಲ ಮಾಡೋ ರೀತಿಯಲ್ಲಿ ನಡವಳಿಕೆ ಇರೋದಿಲ್ಲ ಎಂದು ಬಿಕೆಹೆಚ್​ ಪರ ಬ್ಯಾಟ್ ಬೀಸಿದರು.

RELATED ARTICLES

Related Articles

TRENDING ARTICLES