Saturday, November 2, 2024

ಗೃಹ ಜ್ಯೋತಿ ನೋಂದಣಿಗೆ ಇಂದೇ ಕೊನೆಯ ದಿನಾಂಕ! : ಮುಂದೇನು?

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹಜ್ಯೋತಿಗೆ ಮೊದಲ ತಿಂಗಳು ಸುಮಾರು ಶೇ.60 ರಷ್ಟು ಗ್ರಾಹಕರು ಫಲಾನುಭವಿಗಳಾಗಿದ್ದು, ಜುಲೈ ತಿಂಗಳ ಉಚಿತ ವಿದ್ಯುತ್ ಬಿಲ್ ಪಡೆಯಲು ಇಂದೇ ಕೊನೆ ದಿನಾಂಕ ಎಂದು ಇಂಧನ ಇಲಾಖೆ ತಿಳಿಸಿದೆ.

ಗೃಹಜ್ಯೋತಿ ಯೋಜನೆಗೆ ಈಗಾಗಲೇ 1.16 ಕೋಟಿಗೂ ಹೆಚ್ಚು ಜನ ನೋಂದಣಿಯನ್ನು ಮಾಡಿಸಿಕೊಂಡಿದ್ದಾರೆ. ಆದರೆ, ರಾಜ್ಯದಲ್ಲಿ 2.14 ಕೋಟಿ ಉಚಿತ ವಿದ್ಯತ್ ನ ಪಲಾನುಭವಿಗಳಿದ್ದು, ಇನ್ನೂ ಕೋಟಿಗೂ ಅಧಿಕ ಮಂದಿ ನೋಂದಣಿಯನ್ನು ಮಾಡಿಕೊಳ್ಳಬೇಕಿದೆ.

ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಸಿಗ್ತಿಲ್ಲ ಮುಕ್ತಿ!: ಗೊಂದಲಗಳಿಗೆ ಪರಿಹಾರ ಇಲ್ಲಿದೆ

ಆಗಸ್ಟ್ ತಿಂಗಳ ಬಿಲ್ ಸೆಪ್ಟೆಂಬರ್ ಗೆ

ಇದರ ನಡುವೆಯೇ ಇಂಧನ ಇಲಾಖೆ ಮೊದಲ ತಿಂಗಳ ಉಚಿತ ವಿದ್ಯತ್ ಪಡೆಯಲು ಡೆಡ್ ಲೈನ್ ಒಂದನ್ನ ನೀಡಿದ್ದು, ಇದಕ್ಕೆ ಇಂದೇ ಕೊನೆ ದಿನಾಂಕ ವಾಗಿದೆ. ಅಂದರೆ ಜುಲೈ ತಿಂಗಳ ಉಚಿತ ವಿದ್ಯುತ್ ಪಡೆಯಲು ಜುಲೈ 27 ಕೊನೆ ದಿನಾಂಕವಾಗಿದೆ. ಅರ್ಹ ಪಲಾನುಭವಿಗಳು ಜುಲೈ 27ರ ಒಳಗಾಗಿಯೇ ಅರ್ಜಿಯನ್ನ ಸಲ್ಲಿಸಬೇಕು. ಒಂದು ವೇಳೆ ಜುಲೈ 27ರ ನಂತರ ಗೃಹಜ್ಯೋತಿಗೆ ನೊಂದಣಿ ಮಾಡಿಸಿದ್ರೆ, ಆಗಸ್ಟ್ ತಿಂಗಳ ಉಚಿತ ಬಿಲ್ ಅನ್ನು ಸೆಪ್ಟೆಂಬರ್ ನಲ್ಲಿ ಪಡೆಯಬಹುದಾಗಿದೆ.

ಒಟ್ಟಾರೆ, ಗೃಹಜ್ಯೋತಿ ನೋಂದಣಿಗೆ ಸರ್ಕಾರ ಯಾವುದೇ ಕೊನೆ ದಿನಾಂಕ ನಿಗದಿ ಮಾಡಿಲ್ಲ. ಆದರೆ, ಪ್ರತಿ ತಿಂಗಳು ಉಚಿತ ಬಿಲ್ ಅನ್ನು ಪಡೆಯಲು ಪ್ರತಿ ತಿಂಗಳ 27 ಕೊನೆ ದಿನಾಂಕವಾಗಿರುತ್ತೆ.

RELATED ARTICLES

Related Articles

TRENDING ARTICLES