Sunday, December 22, 2024

ಅಕ್ರಮ ಸಂಬಂಧದ ಅನುಮಾನ ಹೆಂಡತಿಯನ್ನು ಕೊಲೆ ಮಾಡಿ ಅತ್ತೆಗೆ ಕರೆ ಮಾಡಿದ ಅಳಿಯ!

ಬೆಂಗಳೂರು : ತನ್ನ ಹೆಂಡತಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಹೆಂಡತಿಯನ್ನು ಕೊಂದ ಗಂಡ ತನ್ನ ಅತ್ತೆಗೆ ಕರೆಮಾಡಿ ತಿಳಿಸಿರುವ ಘಟನೆ ನಗರದ ಮೂಡಲಪಾಳ್ಯದ ಶಿವಾನಂದ ನಗರದಲ್ಲಿ ನಡೆದಿದೆ.

ಇದನ್ನೂ ಓದಿ: ಚಿಕಿತ್ಸೆಗೆ ಹಣವಿಲ್ಲದೆ ಪರದಾಡಿದ ರೋಗಿಗೆ ಆಪರೇಷನ್ ಮಾಡಿದ ಶಾಸಕ ಡಾ.ರಂಗನಾಥ್!

ಗೀತಾ (33) ಕೊಲೆಯಾದ ಮಹಿಳೆ, ಶಂಕರ್​ ತನ್ನ ಪತ್ನಿಯನ್ನು ಕೊಂದ ಪತಿ, ಮೃತ ಗೀತಾ ಬೇರೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಕಾರಣಕ್ಕೆ ಅನುಮಾನಗೊಂಡ ಶಂಕರ್​ ಮೂಡಲಪಾಳ್ಯದ ಶಿವಾನಂದನಗರದಲ್ಲಿ ಕೊಲೆ ಮಾಡಿ ಶವವನ್ನು ತನ್ನ ಮನೆಯ ಸೋಫಾದಲ್ಲಿ ತಂದಿಟ್ಟು ಬಳಿಕ ತನ್ನ ಅತ್ತೆ, ಗೀತಾಳ ತಾಯಿಗೆ ಕರೆ ಮಾಡಿ ನಿಮ್ಮ ಮಗಳನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ.

ಸದ್ಯ ಚಂದ್ರಾಲೇಔಟ್​ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

RELATED ARTICLES

Related Articles

TRENDING ARTICLES