ತುಮಕೂರು: ಮೈಲಿಗೆಯ ಹೆಸರಿನಲ್ಲಿ ಬಾಣಂತಿ ಹಾಗೂ ಮಗುವನ್ನು ಗ್ರಾಮದಿಂದ ಹೊರಗಿಟ್ಟಿದ್ದ ಪರಿಣಾಮ ಹಸುಗೂಸೊಂದು ಮೃತಪಟ್ಟ ಪ್ರಕರಣ ಸುದ್ದಿ ಪ್ರಸಾರವಾದ ಹಿನ್ನೆಲೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಿದರು ಬಾಣಂತಿಯನ್ನು ಮತ್ತೆ ಗ್ರಾಮದ ಹೊರಗಿಟ್ಟಿರುವ ಘಟನೆ ನಡೆದಿದೆ.
ಇದನ್ನು ಓದಿ : ಅಕ್ರಮ ಸಂಬಂಧದ ಅನುಮಾನ ಹೆಂಡತಿಯನ್ನು ಕೊಲೆ ಮಾಡಿ ಅತ್ತೆಗೆ ಕರೆ ಮಾಡಿದ ಅಳಿಯ!
ಗೊಲ್ಲ ಸಮುದಾಯದ ಮೈಲಿಗೆ ಸಂಪ್ರದಾಯಕ್ಕೆ ಜೋತುಬಿದ್ದದ್ದ ಕುಟುಂಬವನ್ನು ಭೇಟಿ ಮಾಡಿದ ಅಧಿಕಾರಿಗಳ ತಂಡ ಬಾಣಂತಿಯನ್ನ ಮನೆಯೊಳಗೆ ಸೇರಿಸಿಕೊಳ್ಳುವಂತೆ ಮನವೊಲಿಸಿದ್ದರು, ಇದೇ ಸಂದರ್ಭದಲ್ಲಿ ಅಧಿಕಾರಿಗಳ ಮನವೊಲಿಕೆಗೆ ಪ್ರತಿಕ್ರಿಯಿಸಿದ್ದ ಬಾಣಂತಿ ವಸಂತಾ ಪತಿ, ಗೊಲ್ಲ ಸಮುದಾಯದ ಸಂಪ್ರದಾಯದಂತೆ ಪೂಜೆ, ಪುನಸ್ಕಾರಗಳನ್ನ ಮಾಡಿದ ಬಳಿಕ ಬಾಣಂತಿಯನ್ನ ಮನೆಯೊಳಗೆ ಸೇರಿಸುವುದಾಗಿ ಭರವಸೆ ನೀಡಿದ್ದರು.
ಇತ್ತ ಅಧಿಕಾರಿಗಳು ವಾಪಸಾಗುತ್ತಿದ್ದಂತೆ ತಮ್ಮ ಹಳೇ ಪದ್ಧತಿಗೆ ಮುಂದುವರೆಸಿದ ಕುಟುಂಬಸ್ಥರು, ನಿರಂತರ ಮಳೆ ಸುರಿಯುತ್ತಿದ್ದರು ಬಾಣಂತಿಯನ್ನು ಊರ ಹೊರಗಿನ ಗುಡಿಸಲೇ ಬಿಟ್ಟುಬಂದಿದ್ದಾರೆ.