Monday, December 23, 2024

ತೆಲುಗು ‘ಭೀಮ’ನಿಗಾಗಿ ಒಂದಾದ ಸ್ಯಾಂಡಲ್ ​ವುಡ್ ಟಾಪ್ ಟೆಕ್ನಿಷಿಯನ್ಸ್

ಬೆಂಗಳೂರು :  ಭೀಮ ಸಿನಿಮಾಗಾಗಿ ಮೂವರು ಕನ್ನಡದ ಟಾಪ್ ಟೆಕ್ನಿಷಿಯನ್ಸ್ ಒಟ್ಟಿಗೆ ಕೈ ಜೋಡಿಸಿದ್ದಾರೆ. ಅರೇ ಭೀಮ ನಮ್ಮ ಸ್ಯಾಂಡಲ್​ವುಡ್ ಸಲಗ ದುನಿಯಾ ವಿಜಯ್​​ ಮಾಡ್ತಿರೋ ಅಪ್ಪಟ ಕನ್ನಡ ಮೂವಿ ಅಲ್ವಾ..? ಅದಕ್ಕೆ ಮೂರು ಮಂದಿ ಕನ್ನಡಿಗರು ಕೈ ಜೋಡಿಸೋದು ಏನಿದೆ ಅಂತ ಕನ್ಫ್ಯೂಸ್ ಆಗ್ಬೇಡಿ. ನಾವು ಹೇಳೋಕೆ ಹೊರಟಿರೋ ಸ್ಟೋರಿ ಕನ್ನಡದ ಭೀಮನಲ್ಲ, ಪಕ್ಕದ ಟಾಲಿವುಡ್ ಭೀಮ ಗೋಪಿಚಂದ್.

ಭೀಮ ಅಂದಾಕ್ಷಣ ಎಲ್ರಿಗೂ ನೆನಪಾಗೋದೇ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸುತ್ತಿರೋ ಹೊಚ್ಚ ಹೊಸ ಸಿನಿಮಾ. ಮಾಸ್ತಿ ಡೈಲಾಗ್ಸ್​​ನಲ್ಲಿ ಭೀಮ.. ಕೆಣಕದಿದ್ರೆ ಕ್ಷೇಮ ಅನ್ನೋ ಟ್ಯಾಗ್​​ಲೈನ್ ಕೂಡ ಇರೋ ಈ ಸಿನಿಮಾ ಸದ್ಯ ಮೇಕಿಂಗ್ ಹಂತದಲ್ಲೇ ಅತೀವ ನಿರೀಕ್ಷೆ ಮೂಡಿಸಿದೆ. ಆದ್ರೀಗ ನಾವು ಮತ್ತೊಬ್ಬ ಭೀಮನ ಬಗ್ಗೆ ಹೇಳೋಕೆ ಹೊರಟಿದ್ದೇವೆ. ಆದ್ರೆ ಅವ್ರು ಪಕ್ಕದ ಟಾಲಿವುಡ್ ಇಂಡಸ್ಟ್ರಿಯ ಭೀಮ ಅನ್ನೋದು ಇಂಟರೆಸ್ಟಿಂಗ್.

ಇದನ್ನು ಓದಿ : ‘ವಿಶ್ವ ಕುಂದಾಪ್ರ ಕನ್ನಡ ಹಬ್ಬ’ಕ್ಕೆ ತಾರಾ ಮೆರುಗು.. ಸ್ಟಾರ್ಸ್ ಕಲರವ

ನಟ ಗೋಪಿಚಂದ ನಟನೆಯ 31ನೇ ಸಿನಿಮಾಗೆ ಭೀಮ ಅನ್ನೋ ಟೈಟಲ್ ಫಿಕ್ಸ್ ಆಗಿದೆ. ಇದೊಂದು ಖಡಕ್ ಪೊಲೀಸ್ ಕಾಪ್ ಕುರಿತ ಹೈ ವೋಲ್ಟೇಜ್ ಌಕ್ಷನ್ ಎಂಟರ್​ಟೈನರ್ ಆಗಿದ್ದು, ಫಸ್ಟ್ ಲುಕ್ ಪೋಸ್ಟರ್​ನಿಂದ ಹೈಪ್ ಕ್ರಿಯೇಟ್ ಮಾಡಿದೆ. ಅಂದಹಾಗೆ ಹೀರೋ ಮಾತ್ರ ಆಂಧ್ರಾವಾಲ. ಆದ್ರೆ ಅದಕ್ಕೆ ಆಕ್ಷನ್ ಕಟ್ ಹೇಳ್ತಿರೋ ಡೈರೆಕ್ಟರ್​ನಿಂದ ಹಿಡಿದು, ಪ್ರಮುಖ ಟೆಕ್ನಿಷಿಯನ್ಸ್ ಎಲ್ಲಾ ಕನ್ನಡಿಗರೇ.

ಟಾಲಿವುಡ್ ನಲ್ಲಿ ಸದ್ದು ಮಾಡಿದ ಡೈರೆಕ್ಟರ್ ಹರ್ಷ.

ಶಿವರಾಜ್​ಕುಮಾರ್​ರ ಹೋಮ್ ಬ್ಯಾನರ್ ಗೀತಾ ಪಿಕ್ಚರ್ಸ್​ನಡಿ ಮೊದಲ ಸಿನಿಮಾ ಮಾಡಿದ ಭಜರಂಗಿ, ವಜ್ರಕಾಯ ಖ್ಯಾತಿಯ ಡೈರೆಕ್ಟರ್ ಹರ್ಷ, ಪಕ್ಕದ ಟಾಲಿವುಡ್​​ನಲ್ಲೂ ಸದ್ದು ಮಾಡಿದ್ರು. ವೇದ ಸಿನಿಮಾ ಕನ್ನಡದಲ್ಲಿ ಹಿಟ್ ಆಗ್ತಿದ್ದಂತೆ ಪಕ್ಕದ ತೆಲುಗಿಗೂ ವಾಯ್ಸ್ ಡಬ್ ಆಗಿ, ದೊಡ್ಡ ಸಂಚಲನ ಮೂಡಿಸಿತು. ಅದೇ ಕಾರಣದಿಂದ ಹರ್ಷಗೆ ಗೋಪಿಚಂದ್ ಜೊತೆ ಸಿನಿಮಾ ಮಾಡೋ ಅವಕಾಶ ಸಿಕ್ಕಿತು.

ಜಯಂ, ವರ್ಷಂ ನಂತಹ ಎವರ್​ಗ್ರೀನ್ ಸಿನಿಮಾಗಳಲ್ಲಿ ವಿಲನ್ ಆಗಿ ಬಣ್ಣ ಹಚ್ಚೋ ಮೂಲಕ ಎಲ್ಲರ ದಿಲ್ ಗೆದ್ದ ಗೋಪಿಚಂದ್, ಸದ್ಯ ಹೀರೋ ಆಗಿ ಕಮಾಲ್ ಮಾಡ್ತಿದ್ದಾರೆ. ಹರ್ಷ ನಿರ್ದೇಶನದ ಭೀಮ ಚಿತ್ರ ಚೆನ್ನಾಗಿ ಮೂಡಿಬರಬೇಕು ಅನ್ನೋ ಉದ್ದೇಶದಿಂದ ಕನ್ನಡದ ಟಾಪ್ ಟೆಕ್ನಿಷಿಯನ್ಸ್ ಜೊತೆ ಕೆಲಸ ಮಾಡ್ತಿದ್ದಾರೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಜೊತೆ ಮ್ಯುಸಿಕ್ ಕಂಪೋಸ್ ಮಾಡಿಸ್ತಿರೋ ಹರ್ಷ, ಪ್ಯಾನ್ ಇಂಡಿಯಾ ಸ್ಟಂಟ್ ಮಾಸ್ಟರ್ ಆಗಿ ಮಿಂಚ್ತಿರೋ ರವಿವರ್ಮ ಕೈಯಿಂದ ಸಾಹಸ ದೃಶ್ಯಗಳನ್ನ ಮಾಡಿಸಿದ್ದಾರೆ.

ಒಟ್ಟಾರೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬಂದ ಬಳಿಕ ಕಲಾವಿದರು ಹಾಗೂ ಟೆಕ್ನಿಷಿಯನ್ಸ್​ಗೆ ಭಾಷೆಯ ಹಂಗಿಲ್ಲ. ಭಾವನೆಗಳೇ ಸಿನಿಮದ ಜೀವಾಳ ಅನ್ನುವಂತಾಗಿದೆ. ಅದ್ರಲ್ಲೂ ಡಬ್ಬಿಂಗ್ ಕಾನ್ಸೆಪ್ಟ್ ಚಾಲ್ತಿಯಲ್ಲಿರೋದ್ರಿಂದ ಒಂದು ಭಾಷೆಯಲ್ಲಿ ಚಿತ್ರಿಸಿ, ಉಳಿದ ನಾಲ್ಕೈದು ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಲಾಗ್ತಿದೆ. ಆ ನಿಟ್ಟಿನಲ್ಲಿ ಭೀಮ ಕೂಡ ಪ್ಯಾನ್ ಇಂಡಿಯಾ ಚಿತ್ರವಾಗಿ ಹೊರಹೊಮ್ಮಲಿದೆ. ಕನ್ನಡ ಹಾಗೂ ತೆಲುಗು ಮಂದಿಯ ಸಮಾಗಮಕ್ಕೆ ಸಾಕ್ಷಿ ಆಗಿರೋ ಭೀಮ, ಬಾಕ್ಸ್ ಅಫೀಸ್​​ ಮೇಲೆ ಬಲ ಪ್ರಯೋಗ ಮಾಡೋದ್ರಲ್ಲಿ ಡೌಟೇ ಇಲ್ಲ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES