Wednesday, January 22, 2025

ಡೀಸೆಲ್ ಕದಿಯಲು ಬಂದವನನ್ನು ಕೊಂದ ಲಾರಿ ಚಾಲಕರು

ಹೊಸಕೋಟೆ: ನಿಂತಿದ್ದ ಲಾರಿಗಳಲ್ಲಿ ಡೀಸೆಲ್​ ಕದಿಯಲು ಹೋದ ವ್ಯಕ್ತಿಯೊಬ್ಬ ಚಾಲಕರ ಥಳಿತಕ್ಕೊಳಗಾಗಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ಇದನ್ನೂ ಓದಿ: ಮಳೆ ನೀರನ್ನು ಕುಡಿದು ದಣಿವಾರಿಸಿಕೊಂಡ ಹುಲಿರಾಯ

ಟ್ರಕ್​ ಟರ್ಮಿನಲ್​ ಬಳಿ ನಿಲ್ಲಿಸಿದ್ದ 15 ಕ್ಕೂ ಹೆಚ್ಚು ಲಾರಿಗಳಲ್ಲಿ ಮಂಗಳವಾರ ತಡರಾತ್ರಿ ಡೀಸೆಲ್ ಕಳವಿಗೆ ಮೂವರು ಬಂದಿದ್ದರು.  ಈ ವೇಳೆ  ಒಬ್ಬ ಚಾಲಕನಿಗೆ ಎಚ್ಚರವಾಗಿ ಹಾರ್ನ್​ ಮಾಡುವ ಮೂಲಕ ಇತರೆ ಲಾರಿ ಚಾಲಕರನ್ನು ಎಚ್ಚರಿಸಿ ಕಳ್ಳರನ್ನು ಹಿಡಿಯಲೆತ್ನಿಸಿದ್ದಾನೆ, ಆಗ ಕಳ್ಳರಲ್ಲಿ ಇಬ್ಬರು ತಪ್ಪಿಸಿಕೊಂಡು ಓಡಿದ್ದಾರೆ, ಇದರಲ್ಲಿ ಒಬ್ಬ ಸಿಕ್ಕಿಹಾಕಿಕೊಂಡಿದ್ದಾನೆ, ಕೈಗೆ ಸಿಕ್ಕವನ ಮೇಲೆ ಲಾರಿ ಚಾಲಕರು ಮನಸೋ ಇಚ್ಚೆ ಥಳಿಸಿದ್ದರಿಂದ ಆತ ಪ್ರಜ್ಕ್ಷೆ ತಪ್ಪಿದ್ದಾನೆ.

ಆತ ಪ್ರಜ್ಕ್ಷೆ ತಪ್ಪಿ ನಿತ್ರಾಣಗೊಂಡಿದ್ದನ್ನು ಗಮನಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಯತ್ನಿಸಿದ್ದಾರೆ ಅದಾಗಲೇ ಆ ವ್ಯಕ್ತಿ ಮೃತಪಟ್ಟಿದ್ದಾನೆನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 10 ಲಾರಿ ಚಾಲಕರನ್ನು ವಶಕ್ಕೆ ಪಡೆದ್ದಿದ್ದಾರೆ. ಸದ್ಯ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

RELATED ARTICLES

Related Articles

TRENDING ARTICLES