Wednesday, January 22, 2025

ಡೆತ್‌ನೋಟ್ ಬರೆದಿಟ್ಟು ಯುವತಿ ನೇಣಿಗೆ ಶರಣು

ಬೆಂಗಳೂರು : ಫೇಸ್ ಬುಕ್ ಗೆಳೆತನ.. ರೀಲ್ಸ್ ನೋಡಿ ಅಭಿಮಾನಿಯಾದ ಪ್ರಿಯಕರ.. ಬಳಿಕ, ಸ್ನೇಹವನ್ನು ಮೀರಿ, ಲವ್.. ದೋಖಾದವರೆಗೂ ಮುಂದುವರೆದಿತ್ತು ಅವರ ಸಲುಗೆ. ಕೊನೆಗೆ ಪ್ರಿಯಕರನ ಮೋಸದಾಟಕ್ಕೆ ಬಲಿಯಾಗಿ ಯುವತಿ ತನ್ನ ಜೀವನಕ್ಕೆ ಗುಡ್ ಬೈ ಹೇಳಿದ್ದಾಳೆ.

ಹೌದು, ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲ್ಲೂಕು ಕೆಂಪಾಪುರದಲ್ಲಿ ನಡೆದಿದೆ. ಡೆತ್​ನೋಟ್​ನಲ್ಲಿ ಪ್ರಿಯಕರನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವಿದ್ಯಾಶ್ರೀ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿದ್ಯಾಶ್ರೀ, ಅಲ್ಲೇ ಜತೆಗೆ ಕೆಲಸ ಮಾಡುತ್ತಿದ್ದ ಅಕ್ಷಯ್​​ನನ್ನು ಪ್ರೀತಿಸುತ್ತಿದ್ದಳು. ಪ್ರಿಯಕರ ತನ್ನಿಂದ ದೂರ ಹೋಗುತ್ತಿದ್ದಾನೆಂದು ವಿದ್ಯಾಶ್ರೀ ಅನುಮಾನಗೊಂಡು ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಳು. ಈ ಘಟನೆ ಕಳೆದ ಜೂನ್ 22ರಂದು ನಡೆದಿದೆ. ನಿನ್ನೆ ವಿದ್ಯಾಶ್ರೀ ಮನೆಯಲ್ಲಿ ಕುಟುಂಬಸ್ಥರ ಕೈಗೆ ಡೆತ್ ನೋಟ್ ಸಿಕ್ಕಿದೆ.

ನೂರೆಂಟು ಕನಸು, ಮಾಡೆಲಿಂಗ್ ಆಸೆ

ಕೆಂಪಾಪುರ ನಿವಾಸಿ ವಿದ್ಯಾಶ್ರೀ ಎಂಸಿಎ ಪಧವೀಧರೆ ಮಾಡಲ್ ಕಂ ಟೆಕ್ಕಿಯಾಗಿದ್ದಳು. ಅಕ್ಷಯ್‌ನನ್ನು ಪ್ರೀತಿಸಿ ಮದುವೆಯಾಗಲು ಸಿದ್ದವಾಗಿದ್ದಳು. ನೂರೆಂಟು ಕನಸು, ಮಾಡೆಲಿಂಗ್ ಆಸೆ ಎಲ್ಲವನ್ನು ಹೊಂದಿದ್ದ ವಿದ್ಯಾಶ್ರೀ ಜೀವನದಲ್ಲಿ ಪ್ರೀತಿಯಿಂದ ಮೋಸಹೋಗಿ ಜಿಗುಪ್ಸೆಗೊಂಡಿದ್ದಾಳೆ. ಸಾವಿಗೂ ಮುನ್ನ ಪ್ರಿಯಕರನಿಗೆ ಆತ್ಮಹತ್ಯೆ ಮಾಡಿಕೊಳ್ಳಲು ತಯಾರಾಗಿ ಫೋಟೋ ತೆಗೆದು ಗುಡ್ ಬೈ ಅಕ್ಷಯ್ ಅಂತ ಲಾಸ್ಟ್ ಮೆಸೇಜ್ ಕಳುಹಿಸಿ ನೇಣಿಗೆ ಶರಣಾಗಿದ್ದಾಳೆ.

ವಿದ್ಯಾಶ್ರೀ ‘ಡೆತ್‌ನೋಟ್’ನಲ್ಲಿ ಏನಿತ್ತು?

‘ನನ್ನ ಸಾವಿಗೆ ಅಕ್ಷಯ್ ಕಾರಣ. ಅವನು ನನ್ನ ನಾಯಿ ತರ ಡೌಟ್ ಪಡ್ತಾನೆ ಇದ್ದಾನೆ. ನನಗೆ ಕೊಡಬೇಕಾದ 1.76 ಲಕ್ಷ ಕೇಳಿದಾಗ ನನಗೆ, ನನ್ನ ಫ್ಯಾಮಿಲಿಗೆ ಕೆಟ್ಟ ಕೆಟ್ಟ ಮಾತಿನಲ್ಲಿ ಬೈದು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ನನ್ನನ್ನು ಡಿಪ್ರೆಷನ್‌ಗೆ ತಳ್ಳಿದ್ದಾನೆ. ನನಗೆ ಬದುಕಲು ಆಗ್ತಿಲ್ಲ. ಡೇ ಬೈ ಡೇ ನನಗೆ ತುಂಬಾ ಸ್ಟ್ರೆಸ್ ಆಗ್ತಿದೆ. ಅಮ್ಮ, ಗುರು, ಮಾವ I am ಸಾರಿ. ಪ್ಲೀಸ್ ಫರ್ಗೀವ್ ಮಿ. ಎಲ್ಲಾ ಹುಡುಗಿಯರಲ್ಲೂ ವಿನಂತಿ ಮಾಡ್ತೀನಿ ಯಾರನ್ನು ಪ್ರೀತಿ ಮಾಡಬೇಡಿ. ಗುಡ್ ಬಾಯ್ ಟು ದಿಸ್ ವರ್ಲ್ಡ್‌’ – ವಿದ್ಯಾಶ್ರೀ.

ಹೀಗೆ, ಡೆತ್‌ನೋಟ್ ಬರೆದಿಟ್ಟು ವಿದ್ಯಾಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯ ಸೋಲದೇವನಹಳ್ಳಿ ಪೊಲೀಸರು ಯುಡಿಆರ್ (UDR) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES