ಮಂಗಳೂರು : ಮುಸ್ಲಿಂ ವಿದ್ಯಾರ್ಥಿನಿಯರ ವಿಡಿಯೋ ರೆಕಾರ್ಡ್ ಮಾಡಿದ್ರೆ ಕಾಂಗ್ರೆಸ್ ನವರು ತುದಿಗಾಲಲ್ಲಿ ನಿಲ್ಲುತ್ತಿದ್ದರು. ಇಷ್ಟರ ಒಳಗೆ ಎಲ್ಲರ ಮನೆ ಹೊಕ್ಕುತ್ತಿದ್ದರು, ಅರೆಸ್ಟ್ ಮಾಡುತ್ತಿದ್ದರು ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಕಿಡಿಕಾರಿದರು.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಮಕ್ಕಳಾಟಿಕೆ ವಿಷಯವೆಂದು ಕಾಂಗ್ರೆಸ್ ಹೇಳುತ್ತಿದೆ. ಹಿಂದೂಗಳು ಎಂಬ ಕಾರಣಕ್ಕೆ ಅದನ್ನು ಮುಚ್ಚಿಹಾಕಲು ನೋಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಮೊಬೈಲನ್ನು ಫಾರೆನ್ಸಿಕ್ ತನಿಖೆ ಮಾಡದೆ ಪೊಲೀಸರು ಹೇಳಿಕೆ ನೀಡಿದ್ದು ಹೇಗೆ? ತರಾತುರಿಯಲ್ಲಿ ಸಾಕ್ಷಿ ಇಲ್ಲ ಎಂದಿದ್ದವರು, ಈಗ ಎಫ್ಐಆರ್ ದಾಖಲಿಸಿದ್ದಾರೆ. ಪೊಲೀಸರ ತನಿಖೆ ಬಗ್ಗೆ ವಿಶ್ವಾಸ ಇಲ್ಲ. ಪ್ರತ್ಯೇಕ ವಿಶೇಷ ತನಿಖಾ ತಂಡ ರಚನೆ ಮಾಡಬೇಕು. ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಮುಸ್ಲಿಂ ಮತಕ್ಕೆ ಅಂಜಿ, ಇವ್ರು ಇಷ್ಟು ಕೆಟ್ಟ ಕೆಲಸ ಮಾಡ್ತಿದ್ದಾರೆ : ಗೋವಿಂದ ಕಾರಜೋಳ
ವಿದ್ಯಾರ್ಥಿನಿಯರ ಬ್ಲ್ಯಾಕ್ ಮೇಲ್
ವಿದ್ಯಾರ್ಥಿನಿಯರ ಬ್ಲ್ಯಾಕ್ ಮೇಲ್ ಸಹ ನಡೆದಿದೆ ಅಂತ ಸಾರ್ವಜನಿಕರು ಹೇಳುತ್ತಿದ್ದಾರೆ. ಹೀಗಾಗಿ, ಪ್ರಕರಣವನ್ನು ಹಾಸ್ಯಾಸ್ಪದ ಅಂತ ಹೇಳಲು ಸಾಧ್ಯವಿಲ್ಲ. ಉಡುಪಿಯ ಘಟನೆಯನ್ನು ಸಣ್ಣ ಘಟನೆ ಎಂದು ತೆಗೆದುಕೊಳ್ಳುವುದು ಬೇಡ. ವಿಡಿಯೋ ಮಾಡಿದ ಮೂವರು ವಿದ್ಯಾರ್ಥಿನಿಯರು ಕೇರಳದವರು. ಇದರ ಹಿಂದಿರುವ ಕೈವಾಡ ಯಾರದ್ದು ಎಂಬ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ನಾವು ಹಿಂದುತ್ವ ಪರವಾಗಿ ನಿಲ್ಲುತ್ತೇವೆ
ರೆಕಾರ್ಡ್ ಮಾಡಿ ಸಿಕ್ಕಿ ಬೀಳದಿದ್ರೆ ಈ ವಿಡಿಯೋವನ್ನು ಏನು ಮಾಡುತ್ತಿದ್ದರು. ಚುನಾವಣೆ ಬರುತ್ತೆ, ಹೋಗುತ್ತೆ. ಆದ್ರೆ, ನಾವು ಹಿಂದುತ್ವ ಪರವಾಗಿ ನಿಂತೇ ನಿಲ್ಲುತ್ತೇವೆ. ಕಾಂಗ್ರೆಸ್ ನಾಯಕರ ಟ್ವೀಟ್ ನೋಡಿದ್ರೆ ಮುಚ್ಚಿ ಹಾಕಲು ಹೊರಟಂತಿದೆ ಎಂದು ಭರತ್ ಶೆಟ್ಟಿ ವಿಷಾಧ ವ್ಯಕ್ತಪಡಿಸಿದರು.