Wednesday, January 22, 2025

‘ವಿಶ್ವ ಕುಂದಾಪ್ರ ಕನ್ನಡ ಹಬ್ಬ’ಕ್ಕೆ ತಾರಾ ಮೆರುಗು.. ಸ್ಟಾರ್ಸ್ ಕಲರವ

ಬೆಂಗಳೂರು : ಪ್ರತೀ ವರ್ಷದಂತೆ ಈ ವರ್ಷವೂ ಸಿಲಿಕಾನ್ ಸಿಟಿಯಲ್ಲಿ ವಿಶ್ವ ಕುಂದಾಪ್ರ ಕನ್ನಡ ಹಬ್ಬ ಬಹಳ ಅದ್ಧೂರಿಯಾಗಿ ನಡೆದಿದ್ದು. ಅದಕ್ಕೆ ಉಪೇಂದ್ರ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ಸೇರಿದಂತೆ ಸಾಕಷ್ಟು ಸ್ಟಾರ್ ನಟರು ಈ ಚಿತ್ರದಲ್ಲಿ ಮೆರಗು ನೀಡಿದ್ದಾರೆ.  ಹಾಗೆಯೇ ಡಿವೈನ್ ಸ್ಟಾರ್ ರಿಷಬ್ ಹೊಡೆದ ಕಾಲ್​ಶೀಟ್ ಕುರಿತು ಡೈಲಾಗ್ ಹಾಗೂ ಉಪ್ಪಿಯ ಪಂಚೆ ಡೈಲಾಗ್ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿವೆ.

ವಿಶ್ವ ಕುಂದಾಪ್ರ ಕನ್ನಡ ಹಬ್ಬ ರೀಸೆಂಟ್ ಆಗಿ ಬೆಂಗಳೂರಿನಲ್ಲಿ ನಡೆದ ಈ ಅರ್ಥಪೂರ್ಣ ಹಾಗೂ ಅವಿಸ್ಮರಣೀಯ ಕಾರ್ಯಕ್ರಮಕ್ಕೆ ಕುಂದಾಪ್ರ ಕನ್ನಡಿಗರು ಹೊಸ ಮೆರುಗು ತಂದರು. ತಮ್ಮ ಸ್ಥಳೀಯ ಕನ್ನಡ ಹಾಗೂ ಅಲ್ಲಿನ ಆಚಾರ, ವಿಚಾರ, ನಂಬಿಕೆಗಳ ಬಗ್ಗೆ ಅಪಾರ ಪ್ರೀತಿ, ಗೌರವ ಇರೋ ಕುಂದಾಪುರಿಯನ್ಸ್, ವರ್ಷಕ್ಕೊಮ್ಮೆ ಅದನ್ನ ದೊಡ್ಡ ಮಟ್ಟದಲ್ಲಿ ಆಚರಿಸ್ತಾರೆ.

ಇದನ್ನು ಓದಿ : KSR ಪ್ರೀಮಿಯರ್ ಟಿಕೆಟ್ಸ್ ಸೋಲ್ಡ್ ಔಟ್..! ನಿರ್ದೇಶಕ ಶಶಾಂಕ್ ಖುಷ್

ರಿಯಲ್ ಸ್ಟಾರ್ ಉಪೇಂದ್ರ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಟೋಬಿ ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ, ಕೆಜಿಎಫ್ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರು ಹೀಗೆ ಸಾಕಷ್ಟು ಮಂದಿ ಸ್ಯಾಂಡಲ್​ವುಡ್ ತಾರೆಯರು ಈ ವಿಶ್ವ ಕುಂದಾಪ್ರ ಹಬ್ಬದ ಸಂಭ್ರಮವನ್ನ ದ್ವಿಗುಣಗೊಳಿಸಿದ್ರು. ಇವರೆಲ್ಲರೂ ಕುಂದಾಪುರ ಮೂಲದವರೇ ಅನ್ನೋದು ಮತ್ತೊಂದು ಇಂಟ್ರಸ್ಟಿಂಗ್ ವಿಷಯ.

ಪಂಚೆ ಹುಷಾರು ಮಾರ್ರೆ..!

ಕನ್ನಡ ಚಿತ್ರರಂಗದ ಟ್ರೆಂಡ್ ಸೆಟ್ಟರ್​​ಗಳಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕೂಡ ಒಬ್ರು. ಅಸಿಸ್ಟೆಂಟ್ ಡೈರೆಕ್ಟರ್ ಆಗಿ, ನಂತರ ನಟ, ಡೈರೆಕ್ಟರ್, ಹೀರೋ, ನಿರ್ಮಾಪಕ ಹೀಗೆ ಚಿತ್ರರಂಗದ ಬೇರೆ ಬೇರೆ ಆಯಾಮಗಳಲ್ಲಿ ತೊಡಗಿಸಿಕೊಂಡ ಉಪೇಂದ್ರ, ಇಂಡಸ್ಟ್ರಿಯಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡರು. ಸದ್ಯ ಯು & ಐ ಸಿನಿಮಾನ ಡೈರೆಕ್ಟ್ ಮಾಡಿ, ಅದ್ರಲ್ಲಿ ಌಕ್ಟ್ ಮಾಡ್ತಿರೋ ಉಪ್ಪಿ, ಕುಂದಾಪ್ರ ಹಬ್ಬದಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆದರು. ರಿಷಬ್ ಜೊತೆ ವೇದಿಕೆ ಹಂಚಿಕೊಂಡು, ಪಂಚೆ ಹುಷಾರು ಮಾರ್ರೆ ಅಂತ ಕಾಲೆಳೆದರು.

ಜೀವ ಕೊಟ್ಟಿದ್ದು ಕುಂದಾಪ್ರ

ಇನ್ನು ಕಾಂತಾರ ಚಿತ್ರದಿಂದ ಕನ್ನಡ ಚಿತ್ರರಂಗವನ್ನು ಗ್ಲೋಬಲ್ ಲೆವೆಲ್​​ನಲ್ಲಿ ರೆಪ್ರೆಸೆಂಟ್ ಮಾಡಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಕುಂದಾಪ್ರ ಕನ್ನಡದಲ್ಲೇ ಮಾತನಾಡೋ ಮೂಲಕ ಗಮನ ಸೆಳೆದರು. ಅಣ್ಣಾವ್ರ ಕಾಲದಲ್ಲಿ ಲಾರಿ, ಬಸ್, ಟ್ರ್ಯಾಕ್ಟರ್​​ ಮಾಡಿಕೊಂಡು ಸಿನಿಮಾ ನೋಡ್ತಿದ್ದಂತೆ, ನಮ್ಮ ಕಾಂತಾರ ಚಿತ್ರಕ್ಕೂ ಅದೇ ರೀತಿ ಬಸ್ ಮಾಡ್ಕೊಂಡ್ ಬಂದು ನೀವು ವೀಕ್ಷಿಸಿರೋದು ನಿಜಕ್ಕೂ ಖುಷಿ ಆಗುತ್ತೆ ಎಂದರು. ಜೀವ ಕೊಟ್ಟಿದ್ದು ಕುಂದಾಪ್ರ ಇರಬಹುದು. ಆದ್ರೆ ಜೀವನ ಕೊಟ್ಟಿದ್ದು ಮಾತ್ರ ಬೆಂಗಳೂರು ಅಂತ ಹೆಮ್ಮೆಯಿಂದ ಹೇಳಿಕೊಂಡರು.

ಡೇಟ್ ಬೇಕು ಎಂದ ಪ್ರಮೋದ್ ಶೆಟ್ಟಿಗೆ, ಜೀವ ಬೇಕಾದ್ರೂ ಕೊಡ್ತೇನೆ. ಡೇಟ್ ಮಾತ್ರ ಕೊಡಲ್ಲ ಅಂದಿದ್ರಂತೆ ರಿಷಬ್ ಶೆಟ್ಟಿ. ಕಾಂತಾರ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಹಿಟ್ ಆಗಿ, ಕಾಂತಾರ-2 ಮೇಕಿಂಗ್​ನಲ್ಲಿ ಬ್ಯುಸಿ ಇರೋ ರಿಷಬ್​ಗೆ ಸಡನ್ ಆಗಿ ಡೇಟ್ ಬೇಕು ಅಂದ್ರೆ ಅವ್ರ ಬಳಿ ಅಂಥದ್ದೇ ಉತ್ತರ ನಿರೀಕ್ಷಿಸಲು ಸಾಧ್ಯ ಅಲ್ಲವೇ..?

ಒಟ್ಟಾರೆ ಶಂಕರ್​ನಾಗ್, ಉಪೇಂದ್ರ ಅಂತಹ ಟ್ರೆಂಡ್ ಸೆಟ್ಟರ್​​ಗಳನ್ನ ನೋಡ್ಕೊಂಡು ಬೆಳೆದ ರಿಷಬ್ ಶೆಟ್ಟಿಗೆ ತನ್ನ ಊರು, ನೆಲ, ಜಲ, ಅಲ್ಲಿನ ಜನ, ಆಚಾರಗಳ ಬಗ್ಗೆ ಇರೋ ಪ್ರೀತಿ, ವ್ಯಾಮೋಹ ನಿಜಕ್ಕೂ ಅವರ್ಣನೀಯ. ಅವ್ರ ಕಾಂತಾರ-2 ಕೂಡ ಮೊದಲ ಭಾಗದಂತೆ ಬಹುದೊಡ್ಡ ಸಕ್ಸಸ್ ಕಾಣಲಿ ಅನ್ನೋದು ಕನ್ನಡಿಗರ ಅಭಿಲಾಷೆ ಹಾಗೂ ಹಾರೈಕೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES