Sunday, December 22, 2024

ಹಿಜಾಬ್ ವಿವಾದಕ್ಕೆ ಸುಪ್ರೀಂಕೋರ್ಟ್ ಹೋಗಿದ್ರು : ಸುನೀಲ್ ಕುಮಾರ್ ಕಿಡಿ

ಉಡುಪಿ : ಉಡುಪಿಯ ಕಾಲೇಜುನಲ್ಲಿ ವಿಡಿಯೋ ಚಿತ್ರೀಕರಣ ಘಟನೆ, ಇದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಕಿಡಿಕಾರಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸರ್ಕಾರಿ ಕಾಲೇಜು ಮಕ್ಕಳು ಹಿಜಾಬ್ ವಿವಾದಕ್ಕೆ ಸುಪ್ರೀಂಕೋರ್ಟ್ ಹೋಗಿದ್ದರು. ಇದರ ಹಿಂದೆ ಯಾವ ಶಕ್ತಿ ಕೆಲಸ ಮಾಡಿದೆ ಅಂತ ಆಗಲೇ ಕೇಳಿದ್ದೆ ಎಂದು ಗುಡುಗಿದ್ದಾರೆ.

ಜಿಲ್ಲಾಡಳಿತ, ಪೊಲೀಸ್ ಇಲಾಖೆ‌ ಈ ವಿಚಾರವನ್ನು ಹಗುರವಾಗಿ ತೆಗೆದುಕೊಂಡಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಶೌಚಾಲಯದಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡುವ ಮಾನಸಿಕತೆಗೆ ಏನು ಹೇಳಬೇಕು? ಇದರ ಹಿಂದೆ ಸಂಘಟನೆಗಳ ಷಡ್ಯಂತರ ಕೆಲಸ ಮಾಡಿದೆ. ಪ್ರಕರಣ ದಾಖಲಿಸುವುದು ಅಷ್ಟೇ ಅಲ್ಲ, ಇದರ ಹಿಂದೆ ಇರುವ ಷಡ್ಯಂತ್ರ ಬಯಲಿಗೆ ಎಳೆಯಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಪೊಲೀಸರಿಗೆ ಸಿಹಿಸುದ್ದಿ: ಹುಟ್ಟುಹಬ್ಬಕ್ಕೆ ರಜೆ ಭಾಗ್ಯ!

1 ಲಕ್ಷದ ಮೊಬೈಲ್ ಕೊಟ್ಟಿದ್ದು ಯಾರು?

ಸಾಮಾನ್ಯ ಮೊಬೈಲ್ ಅಲ್ಲ, ಒಂದು ಲಕ್ಷ ಮೌಲ್ಯದ ಮೊಬೈಲ್ ಇದೆ. ಅವರಿಗೆ ದುಬಾರಿ ಮೊಬೈಲ್ ಕೊಟ್ಟವರು ಯಾರು? ಎಸ್ ಐಟಿ ಮೂಲಕ ತನಿಖೆ ಮಾಡಬಹುದು, ರಾಜ್ಯ ಸರ್ಕಾರ ಮಾಡದಿದ್ದರೆ ಕೇಂದ್ರದ ಗಮನ ಸೆಳೆಯುತ್ತೇವೆ. ಇದು ತಮಾಷೆಗೆ ಆದ ಘಟನೆ ಅಲ್ಲ. ಏಳೆಂಟು ತಿಂಗಳಿಂದ ಈ ರೀತಿ ಆಗ್ತಾ ಇದೆ. ಇದು ಗಂಭೀರ ವಿಚಾರ, ವಿದ್ಯಾರ್ಥಿನಿಯರು ಭಯ ಪಡುತ್ತಾರೆ. ಮಹಿಳಾ ಆಯೋಗ, ಮಹಿಳಾಪರ ಸಂಘಟನೆ ಈ ಬಗ್ಗೆ ಧ್ವನಿ ಎತ್ತಬೇಕು ಎಂದು ತಿಳಿಸಿದ್ದಾರೆ.

ಪ್ರಕರಣ ಹಳ್ಳ ಹಿಡಿಸುವ ಪ್ರಯತ್ನ

ಈ ಘಟನೆಯ ಹಿಂದೆ ಯಾವ ಶಕ್ತಿ‌ ಇದೆ ಅಂತ ತನಿಖೆ ಆಗಬೇಕು. ರಾಜ್ಯ ಸರ್ಕಾರ ಪ್ರಕರಣ ಹಳ್ಳ ಹಿಡಿಸುವ ಪ್ರಯತ್ನ ಮಾಡುತ್ತಿದೆ. ಬೆಂಗಳೂರು ಭಯೋತ್ಪಾದಕರಿಗೆ ಗೃಹ ಸಚಿವರು ಯಾವ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಗೊತ್ತು. ಗೃಹ ಸಚಿವರು ಈ ಪ್ರಕರಣದಲ್ಲಿ ಪೊಲೀಸರ ದಿಕ್ಕು ತಪ್ಪಿಸುತ್ತಿದ್ದಾರೆ. ಪರಮೇಶ್ವರ್ ಹೇಳುವಷ್ಟು ಸಣ್ಣ ವಿಚಾರ ಇದಲ್ಲ. ಅವರಲ್ಲಿ ಇದಕ್ಕಿಂತ ದೊಡ್ಡ ವಿಚಾರಗಳಿರಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES