Wednesday, January 22, 2025

ಬುರ್ಕಾ ಧರಿಸದೇ ಬಂದ ವಿದ್ಯಾರ್ಥಿನಿಯರನ್ನು ಬಸ್​ ನಿಂದ ಕೆಳಗಿಳಿಸಿದ ಬಸ್ ಚಾಲಕ!

ಕಲಬುರ್ಗಿ : ಬುರ್ಖಾ ಧರಿಸದಿದ್ದರೇ ಬಸ್ ಹತ್ತಲು ಬಿಡುವುದಿಲ್ಲ ಎಂದ ಕಲ್ಯಾಣ ಕರ್ನಾಟಕ ಬಸ್​ ನ ಚಾಲಕ ಶಾಲಾ ಮುಸ್ಲಿಂ ವಿದ್ಯಾರ್ಥಿನಿಯರನ್ನು ಬಸ್​ನಿಂದ ಕೆಳಗಿಳಿಸಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಓಕಳಿ ಗ್ರಾಮದ ಬಳಿ ನಡೆದಿದೆ.

ಇದನ್ನೂ ಓದಿ: ಜೆಸಿಬಿ ಬಳಸಿ ಎಟಿಎಂ ಯಂತ್ರ ಕಳವಿಗೆ ಯತ್ನ!

ತಮ್ಮೂರಿಗೆ ಹೋಗುವ ಸಲುವಾಗಿ ಮುಸ್ಲಿಂ ಯುವತಿಯರು ಬಸವಕಲ್ಯಾಣ-ಕಲಬುರ್ಗಿ ಮಾರ್ಗದಲ್ಲಿ ಸಂಚರಿಸುವ ಬಸ್ ಹತ್ತಿದ್ದರು, ಈ ವೇಳೆ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನ ಕಂಡ ಬಸ್​ ಚಾಲಕ, ನೀನು ಮುಸ್ಲಿಂ ಇದಿಯಲ್ವ. ಬುರ್ಖಾ ಧರಿಸಿ ಬಾ, ಆಗ ಮಾತ್ರ ಬಸ್ ಹತ್ತಲು ಬಿಡುತೇನೆ ಎಂದು ಏಕವಚನದಲ್ಲೇ ನಿಂದಿಸಿ ಬಸ್​ ನಿಂದ ಕೆಳಗೆ ಇಳಿಸಿದ್ದಾನೆ ಎಂದು ಶಾಲಾ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ವಿಚಾರ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಶಿಕ್ಷಕರು ಮತ್ತು ಬಸ್ ಚಾಲಕನ ಮಧ್ಯೆ ಮಾತಿನ ಚಕಮಕಿ ನಡೆದಿದೆ, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಚಾಲಕನ ನಡೆಗೆ ಆಕ್ರೋಶ ವ್ಯಕ್ತಪಡಿಸಿದೆ.

RELATED ARTICLES

Related Articles

TRENDING ARTICLES