Wednesday, January 22, 2025

KSR ಪ್ರೀಮಿಯರ್ ಟಿಕೆಟ್ಸ್ ಸೋಲ್ಡ್ ಔಟ್..! ನಿರ್ದೇಶಕ ಶಶಾಂಕ್ ಖುಷ್

ಬೆಂಗಳೂರು : ಕೌಸಲ್ಯಾ ಸುಪ್ರಜಾ ರಾಮನ ಥಿಯೇಟರ್ ಎಂಟ್ರಿಗೆ ಇನ್ನೊಂದು ದಿನ ಬಾಕಿಯಿದೆ. ರಿಲೀಸ್​ಗೂ ಮೊದಲೇ ಸ್ಪೆಷಲ್ ಪೇಯ್ಡ್ ಪ್ರೀಮಿಯರ್ ಶೋಗಳಿಂದ ಟಾಕ್ ಕ್ರಿಯೇಟ್ ಮಾಡಿದೆ.

ಕೌಸಲ್ಯಾ ಸುಪ್ರಜಾ ರಾಮ.. ಶುಕ್ರವಾರ ಅದ್ಧೂರಿಯಾಗಿ ರಿಲೀಸ್ ಆಗ್ತಿರೋ ಸಿನಿಮಾ. ಟ್ರೈಲರ್ ಹಾಗೂ ಸಾಂಗ್ಸ್​ನಿಂದ ದೊಡ್ಡ ಭರವಸೆ ಮೂಡಿಸಿರುವ ಈ ಚಿತ್ರ, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸೋಕೆ ಇನ್ನೊಂದು ದಿನ ಬಾಕಿಯಿದೆ.

ಸಿಕ್ಸರ್, ಮೊಗ್ಗಿನ ಮನಸ್ಸು ಸಿನಿಮಾಗಳಿಂದ ಹಿಡಿದು ಲವ್ 360 ವರೆಗೂ ನಿರ್ದೇಶಕ ಶಶಾಂಕ್ ಡೈರೆಕ್ಟ್ ಮಾಡಿದ ಬಹುತೇಕ ಚಿತ್ರಗಳು ಲವ್ ಥೀಮ್​​ನಿಂದಲೇ ಕೂಡಿವೆ. ಅವೆಲ್ಲವೂ ಸೂಪರ್ ಹಿಟ್ ಕೂಡ ಆಗಿವೆ. ಅವುಗಳ ಸಾಲಿಗೆ ಇದೀಗ ಕೆಎಸ್​ಆರ್ ಹೊಸದಾಗಿ ಸೇರ್ಪಡೆ ಆಗಲಿದೆ.

ಮತ್ತೆ ಕೃಷ್ಣ-ಮಿಲನಾ ಕಮಾಲ್

ಶಶಾಂಕ್ ಸಿನಿಮಾಸ್ ಹಾಗೂ ಕೌರವ ಪ್ರೊಡಕ್ಷನ್ ಹೌಸ್ ಬ್ಯಾನರ್​ನಡಿ ತಯಾರಾಗಿರೋ ಈ ಸಿನಿಮಾದಲ್ಲಿ ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಪ್ರೇಮಂ ಪೂಜ್ಯಂನ ಬೃಂದಾ ಆಚಾರ್ಯ ಕೂಡ ಬಣ್ಣ ಹಚ್ಚಿದ್ದಾರೆ. ಇವ್ರಿಗೆ ಸುಧಾ ಬೆಳವಾಡಿ, ರಂಗಾಯಣ ರಘು ಹಾಗೂ ನಾಗಭೂಷಣ್ ಅಂತಹ ಅದ್ಭುತ ಕಲಾವಿದರು ಸಾಥ್ ನೀಡಿದ್ದಾರೆ.

ತಾಯಿ-ಮಗನ ಸೆಂಟಿಮೆಂಟ್

ಕಿಚ್ಚ ಸುದೀಪ್ ಲಾಂಚ್ ಮಾಡಿದ ಟ್ರೈಲರ್​ನಿಂದ ಹಿಡಿದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರೋ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ. ಸಿನಿಮಾ ನಾಳೆ ತೆರೆಗೆ ಬರುತ್ತಿದ್ದು, ಅದಕ್ಕೂ ಮುನ್ನ ಬೆಂಗಳೂರು ಹಾಗೂ ಮೈಸೂರಿನಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳು ನಡೆದಿವೆ. ಬೆಂಗಳೂರಿನ ಒರಾಯನ್ ಮಾಲ್ ಹಾಗೂ ಮೈಸೂರಿನ ಡಿಆರ್​ಸಿ ಸಿನಿಮಾಸ್​​ನಲ್ಲಿ ಸ್ಪೆಷಲ್ ಪ್ರೀಮಿಯರ್​​ನಿಂದ ಸಿನಿಮಾನ ಕಣ್ತುಂಬಿಕೊಂಡ ಪ್ರೇಕ್ಷಕರು ಮನಸಾರೆ ಮೆಚ್ಚಿ, ಕೊಂಡಾಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲ ಜೊತೆ ಫ್ಯಾಮಿಲಿ ಎಮೋಷನ್ಸ್ ಹಾಗೂ ತಾಯಿ ಮಗನ ಸೆಂಟಿಮೆಂಟ್ ಬಗ್ಗೆ ರಿವ್ಯೂ ಕೊಟ್ಟಿದ್ದಾರೆ.

ಒಟ್ಟಾರೆ, ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ಥಿಯೇಟ್ರಿಕಲ್ ರಿಲೀಸ್​ಗೂ ಮೊದಲೇ ಸ್ಪೆಷಲ್ ಪ್ರೀಮಿಯರ್​ನಿಂದ ಬೊಂಬಾಟ್ ರೆಸ್ಪಾನ್ಸ್ ಪಡೆದುಕೊಂಡಿದೆ. ಇದು ಚಿತ್ರತಂಡದ ಉತ್ಸಾಹವನ್ನು ಹಿಮ್ಮಡಿಗೊಳಿಸಿದೆ. ಶುಕ್ರವಾರದಿಂದ ಬಾಕ್ಸ್ ಆಫೀಸ್​​ನಲ್ಲಿ ಕಮಾಲ್ ಮಾಡಲಿರೋ ಕೆಎಸ್​ಆರ್, ಎಷ್ಟು ಕೋಟಿ ಲೂಟಿ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES