Wednesday, January 22, 2025

ಹೊಲಗಳಲ್ಲಿ ವಜ್ರಕ್ಕಾಗಿ ರೈತರ ಹುಡುಕಾಟ!

ಆಂಧ್ರ : ನೂರಾರು ರೈತರು ತಮ್ಮ ಹೊಲಗಳಲ್ಲಿ ವಜ್ರಕ್ಕಾಗಿ ಶೋಧ ಕಾರ್ಯ ನಡೆತ್ತಿರುವ ಘಟನೆ ಬಳ್ಳಾರಿ ಗಡಿಭಾಗದಲ್ಲಿರುವ ಆಂಧ್ರದ ವಜ್ರಕರೂರು ಗ್ರಾಮದಲ್ಲ ನಡೆದಿದೆ.

ಇದನ್ನೂ ಓದಿ: ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ

ಜುಲೈ ತಿಂಗಳಿನಿಂದ ಸೆಪ್ಟೆಂಬರ್​ ತಿಂಗಳ ವರೆಗೆ ಮಳೆಯಾದ ಸಂದರ್ಭದಲ್ಲಿ ಮಣ್ಣಿನಲ್ಲಿರುವ ವಜ್ರಗಳು ಹೊರಗೆ ಬರುತ್ತದೆ ಎಂದು ಇಲ್ಲಿನ ರೈತರು ತಮ್ಮ ಹೊಲಗಳಲ್ಲಿ ವಜ್ರಕ್ಕಾಗಿ ನಿತ್ಯ ಹುಡುಕಾಡ ನಡೆಸುತ್ತಿದ್ದಾರೆ. ಈ ಹಿಂದೆಯೂ ಕರ್ನೂಲು, ಅನಂತಪುರ ಜಿಲ್ಲೆಯ ಹಲವು ಗ್ರಾಮಗಳಲ್ಲಿನ ರೈತರಿಗೆ ಇತ್ತೀಚೆಗೆ ಸುಮಾರು 2 ಕೋಟಿ ವೆಚ್ಚದ ವಜ್ರಗಳು ಸಿಕ್ಕಿದ್ದವು,

ವಿಜಯನಗರದ ಅರಸರು ಆಳಿದ ಪ್ರಮುಖ ಸ್ಥಳಗಳಲ್ಲಿ ವಜ್ರಕರೂರು ಗ್ರಾಮವೂ ಒಂದು, ಈ ಗ್ರಾಮದಲ್ಲಿ ಪ್ರತಿ ವರ್ಷ ಜುಲೈ ತಿಂಗಳಿನಿಂದ ಸೆಪ್ಟೆಂಬರ್​ ತಿಂಗಳವರೆಗೆ ಸುರಿಯುವ ಭಾರಿ ಮಳೆಗೆ ಭೂಮಿಯ ಒಳಗೆ ಅಡಗಿರುವ ವಜ್ರದ ಹರಳುಗಳು ಮೇಲೆ ಬರುತ್ತವೆ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ. ಇದೇ ಗ್ರಾಮದಲ್ಲಿ ಇತ್ತೀಚೆಗೆ ರೈತರೊಬ್ಬರಿಗೆ ತಮ್ಮ ಹೊಲದಲ್ಲಿ ಸುಮಾರು 2 ಕೋಟಿ ಮೌಲ್ಯದ ವಜ್ರದ ಹರಳು ದೊರೆತದ್ದು ಇಲ್ಲಿನ ಜನರ ನಂಬಿಕೆಗಳಿಗೆ ಮತ್ತಷ್ಟು ಪುಷ್ಟಿ ನಿಡಿದೆ.

RELATED ARTICLES

Related Articles

TRENDING ARTICLES