Monday, December 23, 2024

ನಗ್ನ ವಿಡಿಯೋ ಕಾಲ್ ಮೂಲಕ ರಾಜ್ಯ ಬಿಜೆಪಿ ಸಂಸದರಿಗೆ ಬ್ಲ್ಯಾಕ್ ಮೇಲ್!

ಬೆಂಗಳೂರು : ನಗ್ನ ವಿಡಿಯೋ ಕಾಲ್ ಮೂಲಕ ರಾಜ್ಯದ ಹಿರಿಯ ಸಂಸದರೊಬ್ಬರಿಗೆ ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಡಾ.ಜಿ.ಎಂ ಸಿದ್ದೇಶ್ವರ ಅವರನ್ನು ಹನಿಟ್ರ್ಯಾಪ್​​​ಗೆ ಒಳಪಡಿಸಿ, ಹಣ ಪೀಕಲು ಯತ್ನಿಸಿರುವ ಪ್ರಕರಣ ತಡವಾಗಿ ಬಹಿರಂಗವಾಗಿದೆ.

ಸಂಸದ ಸಿದ್ದೇಶ್ವರ ಅವರು ಇತ್ತೀಚೆಗೆ ಬೆಂಗಳೂರಿಗೆ ಚಿಕಿತ್ಸೆಗಾಗಿ ಆಗಮಿಸಿದ್ದರು. ನಗರದ ಯುಬಿ ಸಿಟಿ ಬಳಿಯ ಫ್ಲ್ಯಾಟ್ ಒಂದರಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಅವರರಿಗೆ ಅಶ್ಲೀಲ ವಾಟ್ಸ್ ಆ್ಯಪ್ ವಿಡಿಯೋ ಕಾಲ್ ಮಾಡಿ ಸೆಕ್ಸ್ ಟಾರ್ಷನ್ ಖೆಡ್ಡಾದಲ್ಲಿ ಕೆಡವಲು ಪ್ರಯತ್ನಿಸಲಾಗಿದೆ.

ಓದನ್ನೂ ಓದಿ : Love You : ಯುವತಿಗೆ ರ್ಯಾಪಿಡೋ ಬೈಕ್ ಚಾಲಕನಿಂದ ಕಿರುಕುಳ

ಹನಿಟ್ರ್ಯಾಪ್ ತಂತ್ರವನ್ನು ಸ್ಟಾಪ್

ಕೂಡಲೇ ಎಚ್ಚೆತ್ತುಕೊಂಡ ಸಂಸದ ಸಿದ್ದೇಶ್ವರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸಂಸದರ ದೂರಿನ ಮೇರೆಗೆ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ. ಅಷ್ಟರಲ್ಲಾಗಲೇ, ವಂಚಕರು ತಮ್ಮ ಹನಿಟ್ರ್ಯಾಪ್ ತಂತ್ರವನ್ನು ಸ್ಟಾಪ್ ಮಾಡಿದ್ದಾರೆ.

Hi.. How Are You!

ಸಂಸದ ಸಿದ್ದೇಶ್ವರ ಅವರಿಗೆ ಬಂದಿದ್ದ ವಿಡಿಯೋ ಕಾಲ್ ರಾಜಸ್ಥಾನದಿಂದ ಬಂದಿದೆ ಎಂದು ಪ್ರಾಥಮಿಕ ತನಿಖೆಗಳಲ್ಲಿ ಬೆಳಕಿಗೆ ಬಂದಿದೆ. ರಾತ್ರಿ ಸುಮಾರು 10.20ರ ಸುಮಾರಿಗೆ ಮೆಸೇಜ್ ವೊಂದು ಬಂದಿತ್ತು. ಆ ಮೆಸೇಜ್​ನಲ್ಲಿ ‘ಹಾಯ್.. ಹೌ ಆರ್ ಯೂ’ ಅಂತ ಟೈಪಿಸಲಾಗಿತ್ತು. ಯಾವುದೋ ಹೊಸ ನಂಬರ್​ನಿಂದ ಮೆಸೇಜ್ ಬಂದಿದ್ದರಿಂದ ಸಂಸದರು ಇದಕ್ಕೆ ರಿಪ್ಲೆ ಮಾಡಿರಲಿಲ್ಲ. ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

RELATED ARTICLES

Related Articles

TRENDING ARTICLES