Wednesday, December 18, 2024

ಕರ್ನಾಟಕ ಸೇರಲು ಮುಂದಾದ ಮಹಾರಾಷ್ಟ್ರದ ಶೇ.90ರಷ್ಟು ಮರಾಠಿ ಗ್ರಾಮಸ್ಥರು!

ಬೆಂಗಳೂರು: ಗಡಿಭಾಗದ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ ಹಲವು ಗ್ರಾಮಗಳ ಗ್ರಾಮಸ್ಥರು, ಮಹಾರಾಷ್ಟ್ರವನ್ನು ತೊರೆದು ಕರ್ನಾಟಕಕ್ಕೆ ಸೇರಲು ತೀರ್ಮಾನಿಸಿದ್ದು ತುಂಬಿದ ಸಭೆಯಲ್ಲಿ ಕೈ ಎತ್ತುವ ಮೂಲಕ ಸರ್ವಾನುಮತದಿಂದ ನಿರ್ಣಯಿಸಿದ್ದಾರೆ.

ಇದನ್ನೂ ಓದಿ: ಇಂದಿನಿಂದ 3 ದಿನಗಳ ಕಾಲ ಯುವ ಕಾಂಗ್ರೆಸ್ ಸಮಾವೇಶ: ರಾಹುಲ್ ಗಾಂಧಿ ಭಾಗಿ

ಮಹಾರಾಷ್ಟ್ರ ಗಡಿಭಾಗದ ಗ್ರಾಮಗಳ ಮೂಲಸೌಕರ್ಯ ಅಭಿವೃದ್ದಿ ಕಾಮಗಾರಿಗಳಿಗೆ ಮಹಾರಾಷ್ಟ್ರ ಸರ್ಕಾರ ಸುಮಾರು 1,900 ಕೋಟಿ ಮೌಲ್ಯದ ಪ್ಯಾಕೇಜ್‌ ಕೊಡುವುದಾಗಿ ಭರವಸೆ ನೀಡಿತ್ತು, ಈ ಭರವಸೆಯನ್ನು ಈಡೆರಿಸದೇ ಗ್ರಾಮಗಳನ್ನು ಕಡೆಗಣಿಸಿದ ಹಿನ್ನೆಲೆ ಕೊಲ್ಲಾಪುರದ ಕಾಗಲ್​ ತಾಲ್ಲೂಕಿನ ಸುಮಾರು 10 ಗ್ರಾಮ ಪಂಚಾಯ್ತಿಗಳ ಶೇ 90% ರಷ್ಟು ಮರಾಠಿಗರು ಕರ್ನಾಟಕಕ್ಕೆ ಸೇರುವ ನಿರ್ಣಯವನ್ನು ಕೈಗೊಂಡಿದ್ದಾರೆ.

ಈ ಹಿಂದೆಯೂ ಮೂಲಸೌಕರ್ಯ ಒದಗಿಸುವಲ್ಲಿ ಮಹಾ ಸರ್ಕಾರ ವಿಫಲವಾಗಿದ್ದಕ್ಕೆ ಮಹಾರಾಷ್ಟ್ರದ ಜತ್ತ ತಾಲ್ಲೂಕಿನ 42 ಹಳ್ಳಿಗಳೂ ಕರ್ನಾಟಕಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದ್ದವು.

ಇದೀಗ ಕಾಗಲ್ ಪಂಚಾಯತಿ ಗ್ರಾಮಸ್ಥರ ನಿರ್ಧಾರವು ಮಹಾರಾಷ್ಟ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ, ಸರ್ಕಾರದ ಯಾವುದೇ ಆಶ್ವಾಸನೆಗೂ ಒಳಗಾಗದೇ ಕರ್ನಾಟಕದೊಂದಿಗೆ ವಿಲೀನಕ್ಕೆ ಸರ್ವಾನುಮತದಿಂದ ತುಂಬಿದ ಸಭೆಯಲ್ಲಿ ಕೈ ಮೇಲಕ್ಕೆತ್ತುವ ಮೂಲಕ ನಿರ್ಧಾರ ಮಾಡಿವೆ.

RELATED ARTICLES

Related Articles

TRENDING ARTICLES