Monday, December 23, 2024

ರಸ್ತೆ ಬದಿಯಲ್ಲಿ 2 ಸಾವಿರ ಮುಖಬೆಲೆಯ 10 ಕೋಟಿ ಮೌಲ್ಯದ ನೋಟುಗಳು ಪತ್ತೆ!

ಬೆಂಗಳೂರು: ಎರಡು ಸಾವಿರ ರುಪಾಯಿ ಮುಖಬೆಲೆಯ ಸುಮಾರು 10 ಕೋಟಿ ಮೌಲ್ಯದ ಕಲರ್ ಜೆರಾಕ್ಸ್ ನೋಟುಗಳು ತಲಘಟ್ಟಪುರ ಸಮೀಪದ ನೈಸ್ ರಸ್ತೆ ಬಳಿ ಪತ್ತೆಯಾಗಿದೆ.

ಇದನ್ನೂ ಒದಿ: ಆಂಟಿ ಜೊತೆ ಅನೈತಿಕ ‘ಸಂ’ಬಂಧ, ಡೆತ್ ನೋಟ್ ಬರೆದು ನೇಣಿಗೆ ಕೊರಳೊಡ್ಡಿದ ವ್ಯಕ್ತಿ!

ಮಂಗಳವಾರ ಬೆಳಗ್ಗೆ ಕನಕಪುರ ರಸ್ತೆ ಬಳಿಯ ನೈಸ್ ರಸ್ತೆ ಬದಿ 2 ಸಾವಿರ ಮುಖಬಲೆಯ ಕಂತೆ ಕಂತೆ ನೋಟುಗಳು ತುಂಬಿದ್ದ ಒಂದು ಸೂಟ್‌ಕೇಸ್ ಹಾಗೂ ಎರಡು ರಟ್ಟಿನ ಬಾಕ್ಸ್‌ಗಳು ಬಿದ್ದಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಕಲರ್ ಜೆರಾಕ್ಸ್ ನೋಟುಗಳನ್ನು ಜಪ್ತಿ ಮಾಡಿದ್ದಾರೆ.

ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್‌ ಎರಡು ಸಾವಿರ ರು. ಮುಖಬೆಲೆಯ ನೋಟುಗಳ ಮುದ್ರಣ ಹಾಗೂ ಚಲಾವಣೆ ನಿಲ್ಲಿಸಿದೆ. ಈಗಾಗಲೇ ಚಲಾವಣೆಯಲ್ಲಿರುವ ಎರಡು ಸಾವಿರ ರು. ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಿಸಿಕೊಳ್ಳಲು ಸೂಚಿಸಲಾಗಿದೆ. ಇದರ ಬೆನ್ನಲ್ಲೇ ಇಷ್ಟೊಂದು ಪ್ರಮಾಣದ ಕಲರ್ ಜೆರಾಕ್ಸ್ ನೋಟುಗಳನ್ನು ರಸ್ತೆ ಬದಿ ಎಸೆಯಲಾಗಿದೆ.

ಈ ಕಲರ್ ಜೆರಾಕ್ಸ್ ನೋಟುಗಳ ಹಿಂದೆ ಖೋಟಾ ನೋಟು ದಂಧೆ ಕೋರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. 2 ಸಾವಿರ ಮುಖಬೆಲೆಯ ನೋಟುಗಳ ಚಲಾವಣೆ ನಿಲ್ಲಿಸಿರುವ ಹಿನ್ನೆಲೆಯಲ್ಲಿ ದಂಧೆ ಕೋರರು ಈ ಕಲರ್ ಜೆರಾಕ್ಸ್‌ ನೋಟುಗಳನ್ನು ರಸ್ತೆಬದಿ ಎಸೆದು ಹೋಗಿರುವ ಸಾಧ್ಯತೆಯಿದೆ. ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES