Wednesday, January 22, 2025

ಕಳಚಿತು ‘ಡೀಲ್ ಮಾಸ್ಟರ್’ನ ಅಸಲಿ ಮುಖವಾಡ : ‘ಪವರ್ ಸ್ಟಿಂಗ್’ಗೆ ಕರುನಾಡು ಸಲಾಂ..!

ಬೆಂಗಳೂರು : ಡೀಲ್‌ ರಾಜ ಟಿ.ಜೆ ಅಬ್ರಹಾಂನ ಒಂದೊಂದೇ ಮುಖವಾಡ ಬಯಲಾಗ್ತಿದೆ. ಹೊರಗೆ ಹೋರಾಟ ಅನ್ನೋ ಸೋಗಲಾಡಿ ಅಬ್ರಹಾಂನ ಅಸಲಿಯತ್ತನ್ನು ನಿಮ್ಮ ‘ಪವರ್ ಟಿವಿ’ ಎಳೆ ಎಳೆಯಾಗಿ ಬಿಚ್ಚಿಟ್ಟಿದೆ. ಪವರ್ ಸ್ಟಿಂಗ್ ಆಪರೇಷನ್‌ಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬರ್ತಿದೆ. ಗಣ್ಯರು, ಹೋರಾಟಗಾರರು, ಜನಸಾಮಾನ್ಯರ ಪ್ರಶಂಸೆ ವ್ಯಕ್ತಪಡಿಸ್ತಿದ್ದಾರೆ.

‘ದುಡ್ಡು.. ಡೀಲ್.. ಪ್ರಭಾವ.. ಟಾರ್ಚರ್​.. ಟಾರ್ಗೆಟ್​..!’ ಇದು ಹೋರಾಟಗಾರನ ಮುಖವಾಡ ಧರಿಸಿರೋ ಸೋಕಾಲ್ಡ್​ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂನ ಅಸಲಿಯತ್ತು. ಹೊರಗೆ ಹೋರಾಟ. ಒಳಗೆಲ್ಲಾ ದುಷ್ಟಕೂಟ ಹೊಂದಿದ್ದ, ಗೋಸುಂಬೆ ‘ಡೀಲ್‌’ ನಾಯಕನ ರಹಸ್ಯವನ್ನು ನಿಮ್ಮ ‘ಪವರ್ ಟಿವಿ’ ಸಾಕ್ಷಿ ಸಮೇತ ಬಟಾ ಬಯಲು ಮಾಡಿದೆ. ಸತ್ಯವಂತ ಎಂಬ ಮುಖವಾಡ ಧರಿಸಿ ಅನಾಚಾರ ಮಾಡ್ತಿದ್ದ ಸೋಗಲಾಡಿ ಅಬ್ರಹಾಂ ಅಸಲಿಯತ್ತನ್ನ ನಾವು ಎಳೆ ಎಳೆಯಾಗಿ ಬಿಚ್ಚಿಟ್ವಿ. ‘ಪವರ್ ಟಿವಿ’ ಕಾರ್ಯಕ್ಕೆ ರಾಜ್ಯದ ಮೂಲೆ ಮೂಲೆಯಲ್ಲೂ ಮೆಚ್ಚುಗೆ ವ್ಯಕ್ತವಾಗ್ತಿದೆ.

100 ಕೋಟಿ ಡಿಮ್ಯಾಂಡ್, 1 ಕೋಟಿಗೆ ಡೀಲ್

ಕೆಎಎಸ್ ಅಧಿಕಾರಿ ಡಾ. ಸುಧಾರಿಗೆ ಇನ್ನಿಲ್ಲದಂತೆ ಕಾಡಿದ್ದ ನೌಟಂಕಿ ಹೋರಾಟಗಾರ 100 ಕೋಟಿ ಡಿಮ್ಯಾಂಡ್ ಮಾಡಿ ಕೊನೆಗೆ 1 ಕೋಟಿಗೆ ಡೀಲ್ ಕುದುರಿಸಿದ್ದ. ಅಡ್ವಾನ್ಸ್ ಆಗಿ 25 ಲಕ್ಷ ರೂಪಾಯಿ ಪಡೆಯುವಾಗ ಖೆಡ್ಡಾಗೆ ಬಿದ್ದಿದ್ದ.. ಕಂತೆ ಕಂತೆ ಹಣ ಪಡೆಯುವಾಗಲೇ ಪವರ್ ಟಿವಿ ಸ್ಟಿಂಗ್‌ನಲ್ಲಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದ.

ಸುಧಾಗೆ ಹೆಜ್ಜೆ ಹೆಜ್ಜೆಗೂ ಟಾರ್ಚರ್

ಪವರ್ ಟಿವಿ ಆಪರೇಷನ್​ನ ಪ್ರಮುಖ ಹೀರೋ ಡಾ. ಸುಧಾ ಅವರ ತಂದೆ. ಕೆಎಎಸ್ ಅಧಿಕಾರಿ ಡಾ. ಸುಧಾಗೆ ಟಿ.ಜೆ ಅಬ್ರಹಾಂ ವಿಪರೀತ ಟಾರ್ಚರ್ ಕೊಡ್ತಿದ್ದ. ಹೆಜ್ಜೆ ಹೆಜ್ಜೆಗೂ ಕಿರುಕುಳ. ಆ ಅಧಿಕಾರಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಅಬ್ರಹಾಂ ಕೊಟ್ಟ ಕಿರುಕುಳ ನೆನಪಿಸಿಕೊಂಡು ಸುಧಾ ತಂದೆ ‘ಪವರ್‌ ಟಿವಿ’ ಸ್ಟುಡಿಯೋದಲ್ಲಿ ಕಣ್ಣೀರಾಕಿದ್ರು.

ಕರುನಾಡಿನಾದ್ಯಂತ ಟಿ.ಜೆ ಅಬ್ರಹಾಂಗೆ ಛೀ.. ಥೂ ಅಂತಿದ್ದಾರೆ. ಡೀಲ್‌ ರಾಜನ ಅಸಲಿ ಮುಖವಾಡವನ್ನು ಬೆತ್ತಲು ಮಾಡಿದ ನಿಮ್ಮ ‘ಪವರ್ ಟಿವಿ ಸ್ಟಿಂಗ್ ಆಪರೇಷನ್‌’ಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬರ್ತಿದೆ.

ಒಟ್ನಲ್ಲಿ, ಅಧಿಕಾರಿಗಳನ್ನೇ ಟಾರ್ಗೆಟ್ ಮಾಡುವ ಟಿ.ಜೆ ಅಬ್ರಹಾಂನ ಹೋರಾಟದ ಮುಖವಾಡ ಬಯಲಾಗಿದೆ. ಅಬ್ರಹಾಂ ಕಿರುಕುಳಕ್ಕೆ ನೊಂದವರು ಸಾಕಷ್ಟು ಮಂದಿ. ಅಬ್ರಹಾಂ ನಿಜ ಸ್ವರೂಪ ಬಯಲು ಮಾಡಿದ ನಿಮ್ಮ ‘ಪವರ್ ಟಿವಿ ಆಪರೇಷನ್‌’ಗೆ ಪ್ರಶಂಸೆಗಳ ಸುರಿಮಳೆಯೇ ಹರಿದು ಬರ್ತಿದೆ.

RELATED ARTICLES

Related Articles

TRENDING ARTICLES