Monday, December 23, 2024

ಶಾಸಕರ ಕೆಲಸ ಆಗಿಲ್ಲ ಅಂತ ಕೇಳೋದು ಕರೆಕ್ಟ್ : ಕೆ.ಎಚ್. ಮುನಿಯಪ್ಪ

ಬೆಂಗಳೂರು : ಸಚಿವರ ವಿರುದ್ಧ ಸ್ವಪಕ್ಷದ ಶಾಸಕರುಗಳೇ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಕುರಿತು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಪವರ್ ಟಿವಿಯೊಂದಿಗೆ ಮಾತನಾಡಿದ ಅವರು, ಶಾಸಕರ ಕೆಲಸ ಆಗಿಲ್ಲ ಅಂದ್ರೆ ಕೇಳೋದು ಸರಿ ಇದೆ. ನಾವು ಶಾಸಕರಿಗೆ ಸ್ಪಂದಿಸುತ್ತಿದ್ದೇವೆ. ವಿಧಾನಸಭೆ ಅಧಿವೇಶನ ಇದ್ದುದರಿಂದ ಹೆಚ್ಚು ಒತ್ತು ನೀಡಲು ಆಗಲಿಲ್ಲ. ಸಚಿವರು ಏನೇನು ಮಾಡಬಹುದೋ ಅದನ್ನು ಮಾಡುತ್ತಾರೆ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣಾ ಸ್ಪರ್ಧೆ ಬಗ್ಗೆ ಮಾತನಾಡಿದ ಅವರು, ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ. ಪಕ್ಷ ಹೇಳಿದ್ರೆ ಬೇರೆಯವರಿಗೆ ಟಿಕೆಟ್ ಕೊಡಿ ಅಂತ ಹೇಳುತ್ತೇನೆ. ಅಂತಹ ಸಂದರ್ಭ ಇಲ್ಲ. ನಾನಂತೂ ನಿಲ್ಲುವುದಿಲ್ಲ. ಚುನಾವಣೆಗೆ ಕಾಂಗ್ರೆಸ್ ಪಕ್ಷ ಎಲ್ಲ ರೀತಿಯಲ್ಲೂ ತಯಾರಾಗಿದೆ. 20 ರಿಂದ 25 ಸ್ಥಾನ ಗೆಲ್ಲುವ ವಾತಾವರಣ ಇದೆ. ನಮ್ಮ ಪ್ರಣಾಳಿಕೆ ಜಾರಿ ಮಾಡುತ್ತಿದ್ದೇವೆ. ಜನರು ಲೋಕಸಭಾ ಚುನಾವಣೆಯಲ್ಲೂ ನಮಗೆ ಬೆಂಬಲ ಕೊಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಡಿ.ಕೆ ಶಿವಕುಮಾರ್ ಹೇಳಿರೋದು ನಿಜ ಇದೆ : ಬಿ.ಆರ್ ಪಾಟೀಲ್

ನಮ್ಮನ್ನು ಡಿಸ್ಟರ್ಬ್ ಮಾಡೋಕೆ ಆಗಲ್ಲ

ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಕುರಿತು ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಸೇರಿದರೂ ನಮ್ಮನ್ನು ಡಿಸ್ಟರ್ಬ್ ಮಾಡುವುದಕ್ಕೆ ಆಗಲ್ಲ. ಎರಡೂ ಪಕ್ಷಗಳು ಒಂದದರೂ ಮೆಜಾರಿಟಿ ಇಲ್ಲ. ಜನರ ಆಶೋತ್ತರಗಳಂತೆ ನಾವುನುಡಿದಂತೆ ನಡೆಯುತ್ತಿದ್ದೇವೆ. ಯಾವುದೇ ಕಾರಣಕ್ಕೂ ಸರ್ಕಾರ ಬೀಳುವ ಸಂದರ್ಭ ಬರಲ್ಲ. ನಾವು ಸಚಿವರು, ಶಾಸಕರು ಎಲ್ಲರೂ ಒಂದಾಗಿದ್ದೀವಿ ಎಂದು ತಿಳಿಸಿದ್ದಾರೆ.

ಸಿಂಗಪುರಲ್ಲಿ ಆಪರೇಶನ್ ಎಂಬ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆ ಕುರಿತು ಮತನಾಡಿ, ಅದೇನು ಅಂತ ಡಿಕೆಶಿಯನ್ನೇ ಕೇಳಬೇಕು. ಪಕ್ಷೇತರ ಶಾಸಕರ ಬೆಂಬಲದೊಂದಿಗೆ 136 ಶಾಸಕರು ಇದ್ದೀವಿ. ಎಲ್ಲಾ ಶಾಸಕರು ಒಗ್ಗಟ್ಟಾಗಿ ಇದ್ದೀವಿ ಎಂದು ಕೆ.ಎಚ್ ಮುನಿಯಪ್ಪ ಹೇಳಿದ್ದಾರೆ.

RELATED ARTICLES

Related Articles

TRENDING ARTICLES