Wednesday, January 22, 2025

HDDಗೆ ವಯಸ್ಸಾಯ್ತು, ಅವ್ರು ಓಡಾಡೋಕೆ ಆಗಲ್ಲ ಅಂದುಕೊಂಡವ್ರೆ : ದೇವೇಗೌಡ

ಬೆಂಗಳೂರು : ದೇವೇಗೌಡರಿಗೆ ವಯಸ್ಸಾಯ್ತು, ಅವರು ಓಡಾಡಲು ಸಾಧ್ಯವಿಲ್ಲ ಅಂತ ಅಂದುಕೊಂಡಿದ್ದಾರೆ. ಜನತಾದಳ ಪಕ್ಷ ಇದೆ ಎಂದು ಜೆಡಿಎಸ್ ಬಗ್ಗೆ ಹೇಳಿಕೆ ಹರಿಬಿಟ್ಟವರಿಗೆ ಶಾಸಕ ಜಿ.ಟಿ ದೇವೇಗೌಡ ತಿರುಗೇಟು ಕೊಟ್ಟರು. 

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಹೆಚ್​ಡಿಡಿ ಲೋಕಸಭೆಯಲ್ಲಿ ಪ್ರಧಾನಮಂತ್ರಿ ಹುದ್ದೆಗೆ ರಾಜೀನಾಮೆ ಕೊಟ್ರು. ಅಂದು ಮಾಡಿದ ಭಾಷಣ ರೆಕಾರ್ಡ್ ಇದೆ ಎಂದರು.

ಹೆಚ್​ಡಿಡಿ ಎಲ್ಲವನ್ನೂ ಧಿಕ್ಕರಿಸಿ ಫಿನಿಕ್ಸ್ ಹಕ್ಕಿಯಂತೆ ಎದ್ದು ಬರ್ತೀನಿ ಅಂತ ಹೇಳಿದ್ರು. ಅದು ದಾಖಲೆ ಇದೆ. ನಾನು ಬದುಕಿರುವಾಗಲೇ ಪಕ್ಷ ಮುಗೀತು ಅಂತ ಹೇಳ್ತಿದ್ದಾರೆ ಅಂತ ದೇವೇಗೌಡರಿಗೆ ಬೇಸರ ಆಗಿದೆ. ಎಲ್ಲಾ ಶಾಸಕರು, ಮುಖಂಡರ ಸಭೆ ಕರೆದು ಅಭಿಪ್ರಾಯ ಸಂಗ್ರಹ ಮಾಡಿದ್ರು ಎಂದು ಹೇಳಿದರು.

ಇದನ್ನೂ ಓದಿ : ಮಳೆ ಹಾನಿ, ಸರ್ಕಾರದಿಂದ 50 ಸಾವಿರ ಪರಿಹಾರ : ಈಶ್ವರ ಖಂಡ್ರೆ ಭರವಸೆ

ಕುಮಾರಸ್ವಾಮಿ ವಿರಾಮಕ್ಕಾಗಿ ಹೋಗಿದ್ದಾರೆ

ನಮ್ಮ ನಾಯಕ ಹೆಚ್.ಡಿ ಕುಮಾರಸ್ವಾಮಿ ವಿರಾಮಕ್ಕಾಗಿ ಹೊರಗೆ ಹೋಗಿದ್ದಾರೆ. ಹಾಗಾಗಿ, ನಮ್ಮ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಸುದ್ದಿಗೋಷ್ಟಿ ಕರೆಯಲಾಗಿದೆ. ಧಿಡೀರ್ ಸುದ್ದಿಗೋಷ್ಟಿ ಬರಲು ಸೂಚಿಸಿದ್ರು. 2023ರ ಚುನಾವಣೆ ಆದ ಕೂಡಲೆ ಏನಾಗಿದೆ, ಏನು ನಡೆಯುತ್ತಿದೆ. ಎಲ್ಲವನ್ನೂ ರಾಜ್ಯದ ಜನರು ನೋಡುತ್ತಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್​ಗೆ ಹೋಗ್ತಾರೆ ಅಂತ ಬಿಂಬಿಸಿದ್ರು

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಪ್ರಥಮಬಾರಿಗೆ 30ರಿಂದ 40 ಸ್ಥಾನ ಹೆಚ್ಚು ಪಡೆದಿದ್ದೇವೆ. ಐದು ಗ್ಯಾರಂಟಿ ತರುತಿದ್ದೇವೆ. ಮಾತು ಕೊಟ್ಟಂತೆ ನಡೆಯುತ್ತಿದ್ದೇವೆ ಅಂತ ಹೇಳಿದ್ದಾರೆ. ಏನೆಲ್ಲಾ ಮಾಡ್ತಿದ್ದಾರೆ ಅಂತ ನೋಡಿದ್ದೀರಿ. ಸದನದಲ್ಲಿ ಮಾತನಾಡಲು ಸಾಧ್ಯವಾಗಲಿಲ್ಲ. ಸಿದ್ದರಾಮನ ಹುಂಡಿಯಲ್ಲಿ ಅನ್ನಭಾಗ್ಯ ಬಗ್ಗೆ ಹೇಳಿದೆ. ಆದರೆ, 5 ಗ್ಯಾರಂಟಿ ಬಗ್ಗೆ ಮಾತನಾಡಿದ್ರು, ಕಾಂಗ್ರೆಸ್ ಕಡೆ ಹೋಗ್ತಾರೆ ಅಂತ ಬಿಂಬಿಸಿದ್ರು ಎಂದು ಕುಟುಕಿದರು.

RELATED ARTICLES

Related Articles

TRENDING ARTICLES