Wednesday, January 22, 2025

ಆಂಟಿ ಜೊತೆ ಅನೈತಿಕ ‘ಸಂ’ಬಂಧ, ಡೆತ್ ನೋಟ್ ಬರೆದು ನೇಣಿಗೆ ಕೊರಳೊಡ್ಡಿದ ವ್ಯಕ್ತಿ!

ವಿಜಯಪುರ : ವಿವಾಹಿತ ‌ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಮನನೊಂದು ಡೆತ್​ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಪಿ.ಹೆಚ್‌ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿವಣ್ಣ ಚೌಧರಿ(40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೃತ ಶಿವಣ್ಣ ಚೌಧರಿ ಸಾವನ್ನಪ್ಪುವ ಮುನ್ನ ತನ್ನ ಮೊಬೈಲ್​ನಲ್ಲಿ ವಿಡಿಯೋ ಹೇಳಿಕೆಯೊಂದನ್ನು ರೆಕಾರ್ಡ್‌ ಮಾಡಿಟ್ಟಿದ್ದಾನೆ. ಜೊತೆಗೆ ಡೆತ್​ನೋಟ್‌ ಸಹ ಬರೆದಿಟ್ಟು ಸಮಾಜಕ್ಕೊಂದು ಸಂದೇಶ ರವಾನಿಸಿ ಹೋಗಿದ್ದಾನೆ.

ಆಕೆಗೆ ಸಾಕಷ್ಟು ಜನರೊಂದಿಗೆ ಸಂಪರ್ಕ

ತನ್ನ ಸಾವಿಗೆ ಗ್ರಾಮದಲ್ಲಿನ ವಿವಾಹಿತ ಮಹಿಳೆಯೊಂದಿಗೆ ತಾನು ಹೊಂದಿದ್ದ ಅನೈತಿಕ ಸಂಬಂಧವೇ ಕಾರಣ. ಆಕೆಗೆ ನಾನು ಮಾತ್ರವಲ್ಲದೇ ಗ್ರಾಮದ ಸಾಕಷ್ಟು ಜನ ಇನ್ನಿತರರೊಂದಿಗೂ ಸಹ ಸಂಪರ್ಕವಿದೆ. ನನ್ನನ್ನ ಆಕೆ ಆರ್ಥಿಕವಾಗಿ ಜರ್ಜರಿತನನ್ನಾಗಿ ಮಾಡಿ ನಂತರ ಕೈಕೊಟ್ಟಿದ್ದಾಳೆ ಎಂದು ಆರೋಪಿಸಿದ್ದಾನೆ. ಇನ್ನು ನನ್ನ ಸಾವಿನ ನಂತರ ಆಕೆಗೆ ನೀಡಿದ ಹಣವನ್ನು ವಸೂಲಿ ಮಾಡಿ ನನ್ನ ಮಕ್ಕಳಿಗೆ ಸಿಗುವಂತಾಗಬೇಕು ಎಂದು ಸಹ ಬರೆದಿಟ್ಟಿದ್ದಾನೆ.

ವಾಮಾಚಾರದ ಮೂಲಕ ವಶೀಕರಣ

ಇದಲ್ಲದೇ ಗ್ರಾಮದ ಕೆಲವರ ಹೆಸರನ್ನು ಉಲ್ಲೇಖಿಸಿರೋ ಶಿವಣ್ಣ ಚೌಧರಿ, ಗ್ರಾಮದ ಕೆಲವರು ಮಾಟ ಮಂತ್ರ ವಾಮಾಚಾರದ ಮೂಲಕ ಗ್ರಾಮದ ಮಹಿಳೆಯರನ್ನು ವಶೀಕರಣ ಮಾಡಿಕೊಳ್ತಾರೆ. ಇದಕ್ಕೆ ಕೆಲವರು ಸಹಕರಿಸುತ್ತಾರೆ ಎಂದು ಅವರ ಹೆಸರನ್ನು ವಿಡಿಯೋದಲ್ಲಿ ಉಲ್ಲೇಖಿಸಿದ್ದಾನೆ.

ಸಾವಿಗೂ ಮುನ್ನ ಆ ವಿವಾಹಿತ ಮಹಿಳೆಯೊಂದಿಗೆ ತಾನಿದ್ದ ಕೆಲ ಫೋಟೋಗಳನ್ನು ಸಹ ವಾಟ್ಸಾಪ್‌ ಸ್ಟೇಟಸ್‌ ಇಟ್ಟು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಿಂದಗಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED ARTICLES

Related Articles

TRENDING ARTICLES