Monday, December 23, 2024

ಟಿಕೆಟ್​ ವಿಚಾರ: ಕಂಡಕ್ಟರ್​ ಮತ್ತು ಪ್ರಯಾಣಿಕನ ನಡುವೆ ಮಾರಾಮಾರಿ!

ಬೆಂಗಳೂರು :ಚಲಿಸುತ್ತಿದ್ದ ಬಸ್​ನಲ್ಲೇ ಬಿಎಂಟಿಸಿ ಕಂಡಕ್ಟರ್​ ಮತ್ತು ​ ಪ್ರಯಾಣಿಕನ ನಡುವೆ ಮಾರಾಮಾರಿ ಹೊಡೆದಾಟ ನಡೆದಿರುವ ಘಟನೆ ಮತ್ತಿಕೆರೆಯ ರಾಮಯ್ಯ ಕಾಲೇಜು ಬಸ್​ ನಿಲ್ದಾಣದಲ್ಲಿ ಬಳಿ ಭಾನುವಾರ ಸಂಜೆ ನಡೆದಿದೆ.

ಇದನ್ನೂ ಓದಿ: ಕೈ ಪಾಳೆಯದಲ್ಲಿ ಶುರುವಾಯ್ತು ಮೂಲ V/s ವಲಸಿಗ ಫೈಟ್

ಕಂಡಕ್ಟರ್​ ಸಿದ್ದಪ್ಪ ಹಲ್ಲೆಗೊಳಗಾದವರು, ರಾಮಯ್ಯ ಕಾಲೇಜು ನಿಲ್ದಾಣದ ಬಳಿ ಬಿಎಂಟಿಸಿ ಬಸ್​ ಹತ್ತಿದ ಯುವಕನನ್ನು ಕಂಡಕ್ಟರ್ ಸಿದ್ದಪ್ಪ​ ಟಿಕೇಟ್​ ಕೇಳಿದ್ದಾರೆ, ಈ ವೇಳೆ ಟಿಕೆಟ್ ಕೇಳಿದ್ದಕ್ಕೆ ಕಂಡಕ್ಟರ್ ನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಯುವಕ ಹಲ್ಲೆ ಮಾಡಿದ್ದಾನೆ, ಈ ಸಂದರ್ಭದಲ್ಲಿ ಕಂಡಕ್ಟರ್​ ಮತ್ತು ಯುವಕನ ನಡುವೆ ಮಾರಾಮಾರಿ ಹೊಡೆದಾಟ ನಡೆದಿದ್ದು, ಘಟನೆಯಲ್ಲಿ ಕಂಡಕ್ಟರ್​ಗೆ ಗಂಭೀರ ಗಾಯಗಳಾಗಿವೆ. ಪ್ರಯಾಣಿಕನ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸದ್ಯ ಈ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್​ ಆಗಿದೆ.

RELATED ARTICLES

Related Articles

TRENDING ARTICLES