Wednesday, January 22, 2025

ಜು.27ಕ್ಕೆ ಖಾಸಗಿ ಸಾರಿಗೆ​ ಬಂದ್​ : ಸಚಿವರೊಂದಿಗೆ ವಿವಿಧ ಸಂಘಗಳ ಸಭೆ ಬಳಿಕ ನಿರ್ಧಾರ!

ಬೆಂಗಳೂರು : ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಖಾಸಗಿ ಬಸ್​, ಆಟೋ, ಟ್ಯಾಕ್ಸಿ ಸಂಘಟನೆಗಳು ಬಂದ್​ ಗೆ ಕರೆನೀಡಿದ ಬೆನ್ನಲ್ಲೇ ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿದೆ.

ಇದನ್ನೂ ಓದಿ: ಹಾಸ್ಟೆಲ್‌ನ 184 ವಿದ್ಯಾರ್ಥಿಗಳಿಗೆ ಮದ್ರಾಸ್‌ ಐ ಸೋಂಕು!

ಸುಮಾರು 35 ಕ್ಕೂ ಹೆಚ್ಚು ಖಾಸಗಿ ಸಾರಿಗೆ ಸಂಘಗಳೊಂದಿಗೆ ನಗರದ ಶಾಂತಿನಗರ ಸಾರಿಗೆ ಕೇಂದ್ರ ಕಚೇರಿಯಲ್ಲಿ ಸೋಮವಾರ ಬೆಳಗ್ಗೆ 11 ಕ್ಕೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ, ಈ ಸಭೆಯಲ್ಲಿ ವಿವಿಧ ಸಂಘಗಳ ಎಲ್ಲಾ ಸದಸ್ಯರಿಗೂ ಅವಕಾಶವನ್ನು ನೀಡದೇ ಕೇವಲ ಒಂದು ಸಂಘದಿಂದ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳಿಗಷ್ಟೆ ಅವಕಾಶ ಕಲ್ಪಿಸಲಾಗಿದೆ.

ಕಾಂಗ್ರೆಸ್​ ಸರ್ಕಾರದ ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆಗೆ ಅಪಾರ ನಷ್ಟ ಉಂಟಾಗಿದೆ, ಇದರಿಂದಾಗಿ ಸರ್ಕಾರದ ಮುಂದೆ ಹಲವು ಬೇಡಿಕೆ ಇಟ್ಟಿರುವ ಖಾಸಗಿ ಸಂಘಟನೆಗಳು ಇದೇ ಜು. 27ರಂದು ಖಾಸಗಿ ಬಸ್​​, ಆಟೋ, ಟ್ಯಾಕ್ಸಿ ಸಂಘಗಳು ಬಂದ್​​ಗೆ ಕರೆ ನೀಡಿದ್ದವು.

ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಜೊತೆ ಖಾಸಗಿ ಸಾರಿಗೆ ಸಂಘ ಸಂಸ್ಥೆಗಳು ತಮ್ಮ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಸಭೆ ನಡೆಯಲಿದ್ದು ಸಭೆಯ ಬಳಿಗೆ ಜು.27 ರ ಬಂದ್​ ಕುರಿತು ಸ್ಪಷ್ಟನೆ ಸಿಗಲಿದೆ.

RELATED ARTICLES

Related Articles

TRENDING ARTICLES