Sunday, November 3, 2024

‘ಕೈ’ ಪಾಳೆಯದಲ್ಲಿ ಶುರುವಾಯ್ತು ಮೂಲ V/s ವಲಸಿಗ ಫೈಟ್

ಬೆಂಗಳೂರು: ರಾಜ್ಯ ಕಾಂಗ್ರೆಸ್​ನಲ್ಲಿ ಮತ್ತೆ ಮೂಲ ವರ್ಸಸ್ ವಲಸಿಗರ ಫೈಟ್​ ಶುರುವಾದಂತಿದೆ. ಮಾಸ್​ ಲೀಡರ್​ ಸಿದ್ದರಾಮಯ್ಯಗೆ  ಎಷ್ಟೇ ವಿರೋಧಗಳಿದ್ದರು ಯಾರೂ ಕೂಡ ಸಿದ್ದರಾಮಯ್ಯ ವಿರುದ್ಧ ಮಾತನಾಡುವ ಪ್ರಶ್ನೆ ಮಾಡುವ ಧೈರ್ಯ ಮಾಡಿರಲಿಲ್ಲ. ಆದರೀಗ ಕಾಂಗ್ರೆಸ್​ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್​ ಸಿಡಿಸಿದ ಸಿಎಂ ಬದಲಾವಣೆಯ ಒಂದೇ ಒಂದು ಮಾತು ಕಾಂಗ್ರೆಸ್​ ಪಾಳೆಯದಲ್ಲಿ ಅಕ್ಷರಶಃ ಸಂಚಲನವನ್ನೇ ಸೃಷ್ಟಸಿದೆ.

ಇದನ್ನೂ ಓದಿ: ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ : ಚಿಪ್ಸ್​ ಫ್ಯಾಕ್ಟರಿ ಬೆಂಕಿಗಾಹತಿ!

ಸಚಿವಾಕಾಂಕ್ಷಿಯಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌‌ಗೆ ಮಂತ್ರಿಗಿರಿ ಸಿಗದೆ ನಿರಾಶೆಯಾಗಿತ್ತು. ಸಚಿವ ಸ್ಥಾನ ಕೊಡೋದು ಬೇಡ ಅಂತ ಸ್ವತಃ ಸಿದ್ದರಾಮಯ್ಯ ಅಡ್ಡಗಾಲು ಹಾಕಿದ್ದರು. ಇದು ಹರಿಪ್ರಸಾದ್‌ ಆಕ್ರೋಶಕ್ಕೆ ಕಾರಣವಾಗಿತ್ತು. ಹರಿಪ್ರಸಾದ್‌ ಬದಲು ಅದೇ ಸಮುದಾಯಕ್ಕೆ ಸೇರಿದ ಮಧುಬಂಗಾರಪ್ಪ ಅವರನ್ನ ಸಚಿರನ್ನಾಗಿ ಮಾಡಲಾಯ್ತು. ವಿಧಾನಪರಿಷತ್ ಸದಸ್ಯರಿಗೆ ಕೊಡಬೇಕಿದ್ದ ಕೋಟಾದಡಿಯಲ್ಲೂ ಸಚಿವ ಸ್ಥಾನ ಕೊಡದೆ, ಮತ್ತೊಬ್ಬರಿಗೆ ಮಣೆ ಹಾಕಲಾಯ್ತು. ಇದೆಲ್ಲಾ ಘಟನೆಗಳನ್ನ ಇಷ್ಟು ದಿನ ಸಹಿಸಿಕೊಂಡಿದ್ದ ಹರಿಪ್ರಸಾದ್‌, ಏಕಾಏಕಿ ಸಿಎಂ ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದಿದ್ದಾರೆ. ಅಧಿಕಾರಕ್ಕೆ ಕೂರಿಸೋದು ಗೊತ್ತು, ಕೆಳಗೆ ಇಳಿಸೋದು ಗೊತ್ತಿದೆ ಅಂತ ಸಾರ್ವಜನಿಕವಾಗಿ ಹೇಳೋ ಮೂಲಕ ಕಾಂಗ್ರೆಸ್ ಒಳಗಿನ ಬೂದಿ ಮುಚ್ಚಿದ ಕೆಂಡಕ್ಕೆ ಪೆಟ್ರೋಲ್ ಸುರಿದು ಜ್ವಾಲೆಗೆ ಕಾರಣವಾಗಿದ್ದಾರೆ.

ಹರಿಪ್ರಸಾದ್‌ ಹೇಳಿಕೆ ಸಿದ್ದರಾಮಯ್ಯ ಆಪ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತ ಸಿದ್ದರಾಮಯ್ಯ ಪರ ಬ್ಯಾಟ್ ಮಾಡಿರೋ ಸಚಿವರಾದ ಜಮೀರ್ ಅಹ್ಮದ್ ಖಾನ್, ನಾಗೇಂದ್ರ ಸೇರಿದಂತೆ ಹಲವರು ಬಿ.ಕೆ ಹರಿಪ್ರಸಾದ್‌ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆದ್ರೆ, ಯಾರೂ ಕೂಡ ಹರಿಪ್ರಸಾದ್‌ ಪರ ನಿಲ್ಲುವ ಧೈರ್ಯವನ್ನೂ ಮಾಡಿಲ್ಲ. ಆದ್ರೆ, ಹೈಕಮಾಂಡ್ ಹಂತದಲ್ಲಿ ಪ್ರಬಲವಾಗಿರೋ ಹರಿಪ್ರಸಾದ್‌, ಲೋಕಸಭೆ ಚುನಾವಣೆ ಬಳಿಕ ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನ ಕೆಳಗಿಳಿಸಿ, ಮೂಲ ಕಾಂಗ್ರೆಸ್ಸಿಗರಾಗಿರೋ ಡಿಕೆಶಿಗೆ ಅಧಿಕಾರ ಕೊಡಿಸುವ ಬಗ್ಗೆ ಚರ್ಚೆ ಮಾಡಿದ್ದಾರೆ. ಇದು ಕಾಂಗ್ರೆಸ್ ಒಳ ಬೇಗುದಿಗೆ ಕಾರಣವಾಗಿದೆ.

ಸದ್ಯ ಸಿದ್ದರಾಮಯ್ಯ ವಿರುದ್ಧ ಮೊದಲ ಹಂತದಲ್ಲಿ ಕಿಡಿ ಹಚ್ಚಿರೋ ಹರಿಪ್ರಸಾದ್‌, ಸಚಿವ ಸ್ಥಾನ ವಂಚಿತ ಹಿರಿಯ ನಾಯಕರಿಗೆ ದಾರಿ ತೋರಿಸಿದಂತಿದೆ. ಉಳಿದವರು ಇದೇ ರೀತಿ ಪಕ್ಷದೊಳಗೆ ಒಳ ಹೊಡೆತ ಕೊಟ್ರೆ, ಈ ಸರ್ಕಾರಕ್ಕೂ ಕಂಟಕ ಎದುರಾಗೋದ್ರಲ್ಲಿ ಅನುಮಾನವೇ ಇಲ್ಲ. ಕೂಡಲೇ ಹೈಕಮಾಂಡ್ ಮಧ್ಯಪ್ರವೇಶ ಮಾಡದಿದ್ರೆ, ಈ ಸಣ್ಣ ಕಿಡಿ, ಕಾಂಗ್ರೆಸ್ ಪಕ್ಷದಲ್ಲಿ ಮುಂದೆ ದೊಡ್ಡ ಜ್ವಾಲೆಯಾಗೋದ್ರಲ್ಲಿ ಅನುಮಾನವೇ ಇಲ್ಲ.

RELATED ARTICLES

Related Articles

TRENDING ARTICLES