ಮೂಡಿಗೆರೆ: ತಾಲೂಕಿನಲ್ಲಿ ಮದ್ರಾಸ್ ಐ (ಕೆಂಗಣ್ಣು) ಕಾಯಿಲೆಯ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು ಒಬ್ಬರಿಂದ ಮತ್ತೊಬ್ಬರಿಗೆ ಅತಿ ವೇಗವಾಗಿ ಹರಡುತ್ತಿದೆ, ಈಗಾಗಲೇ ತಾಲೂಕಿನಾದ್ಯಂತ ಒಟ್ಟು 184 ವಿದ್ಯಾರ್ಥಿಗಳಲ್ಲಿ ಈ ಮದ್ರಾಸ್ ಐ ಕಾಯಿಲೆ ಕಾಣಿಸಿಕೊಂಡಿದೆ.
ಇದನ್ನೂ ಓದಿ: ಟಿಕೆಟ್ ವಿಚಾರ: ಕಂಡಕ್ಟರ್ ಮತ್ತು ಪ್ರಯಾಣಿಕನ ನಡುವೆ ಮಾರಾಮಾರಿ!
ಕಳೆದ ಏಳೆಂಟು ದಿನಗಳ ಹಿಂದೆ ಈ ಸೋಂಕು ತಾಲೂಕಿನ ಕೆಲ ವಿದ್ಯಾರ್ಥಿ ನಿಲಯಗಳಲ್ಲಿ ಕಾಣಿಸಿಕೊಂಡಿದೆ. ಪಟ್ಟಣದ ಶ್ರೀ ಮೆಟ್ರಿಕ್ ಬಾಲಕರ ಹಾಸ್ಟೆಲ್‌ನ 125 ವಿದ್ಯಾರ್ಥಿಗಳ ಪೈಕಿ 20 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೂಡಲೇ ಹಾಸ್ಟೆಲ್ ವಾರ್ಡನ್ ಎಚ್ಚೆತ್ತುಕೊಂಡು ಮೇಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಸೂಕ್ತ ಚಿಕಿತ್ಸೆ ದೊರಕಿಸಿದ್ದರಿಂದ ಇದೀಗ 20 ವಿದ್ಯಾರ್ಥಿಗಳು ಗುಣಮಖರಾಗಿದ್ದಲ್ಲದೇ ಇತರೇ ವಿದ್ಯಾರ್ಥಿಗಳಿಗೆ ಹರಡುವುದನ್ನು ತಪ್ಪಿಸಲಾಗಿದೆ.
ಬಿದರಹಳ್ಳಿ ಮುರಾರ್ಜಿ ವಸತಿ ಶಾಲೆಯಲ್ಲಿ 450 ಮಕ್ಕಳ ಪೈಕಿ 164 ವಿದ್ಯಾರ್ಥಿಗಳಿಗೆ ಮದ್ರಾಸ್ ಐ ಸೋಂಕು ಆವರಿಸಿಕೊಂಡಿದೆ. ಇದೀಗ ಎಲ್ಲಾ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಗುಣಮುಖರಾಗುತ್ತಿದ್ದಾರೆ.