ಶಿವಮೊಗ್ಗ : ಬಿರುಸಿನ ಗಾಳಿ-ಮಳೆಗೆ ತೆಂಗಿನ ಮರವೊಂದು ಉರುಳಿ ಬಿದ್ದು, ಸಿಮೆಂಟ್ ಗೋದಾಮು ಹಾಗೂ ಕಾರ್ ಶೆಡ್ ಗೆ ಹಾನಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಆನೆಮುಡಿಕೆ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬೃಹತ್ ಗಾತ್ರದ ತೆಂಗಿನ ಮರವೊಂದು ಉರುಳಿ ಬಿದ್ದಿದೆ. ಪರಿಣಾಮ ಗೋದಾಮಿನಲ್ಲಿದ್ದ ತೇಜಪ್ಪ ಎಂಬುವವರಿಗೆ ಸೇರಿದ ಸುಮಾರು 50 ಚೀಲ ಸಿಮೆಂಟ್ ಮಳೆ ನೀರಿಗೆ ಹಾನಿಯಾಗಿದ್ದು, ಗೋದಾಮು ಸಹ ಜಖಂ ಆಗಿದೆ.
ವಿಶ್ವನಾಥ ಎಂಬುವವರ ಮನೆ ಹಿಂಭಾಗದ ಕಾರು ಶೆಡ್ ಮೇಲೆ ಮರ ಬಿದ್ಧ ಪರಿಣಾಮ ಶೆಡ್ ನಲ್ಲಿದ್ದ ಕಾರು ಸೇರಿದಂತೆ ಗೋದಾಮಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ. ಇನ್ನು ಮರವು ವಿದ್ಯುತ್ ತಂತಿಯ ಮೇಲೆಯೂ ಬಿದ್ದಿದ್ದು, ಆನೆಮುಡಿಕೆ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇನ್ನು ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿ
ಕಳೆದೊಂದು ವಾರದಿಂದ ಹಾವೇರಿ ಸೇರಿದಂತೆ ಮಲೆನಾಡು ಭಾಗದಲ್ಲಿ ಸಾಕಷ್ಟು ಮಳೆ ಆಗುತ್ತಾ ಇರೋದ್ರಿಂದ ಹಾವೇರಿಯಲ್ಲಿ ಹರಿಯುವ ವರದ, ಕುಮದ್ವತಿ, ಧರ್ಮ, ತುಂಗಭದ್ರಾ ನದಿಗಳು ಅಪಾಯದ ಮಟ್ಟವನ್ನ ಮೀರಿ ಹರಿಯುತ್ತಿದೆ. ಹಾವೇರಿ ಕೂಡ್ಲ ಸಂಪರ್ಕಿಸುವ ವರದ ನದಿಯ ಸಂಪರ್ಕ ಸೇತುವೆ ನದಿಯ ನೀರು ತುಂಬಿ ಹರಿಯುತ್ತಿದೆ.