ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿ ಇಂದಿಗೆ 14 ದಿನ ಕಳೆದಿದೆ.
ಜುಲೈ 10ರಂದು ಸಿಎಂ ಸಿದ್ದರಾಮಯ್ಯನವರು ಅನ್ನಭಾಗ್ಯ ಹಣ ವರ್ಗಾವಣೆಗೆ ಚಾಲನೆ ನೀಡಿದ್ದರು. ಅನ್ನಭಾಗ್ಯಕ್ಕೆ ಚಾಲನೆ ದೊರೆತಾಗಿನಿಂದ ಇಲ್ಲಿಯವರೆಗೂ ರಾಜ್ಯ ಸರ್ಕಾರ 24 ಜಿಲ್ಲೆಗಳ ಒಟ್ಟು 78 ಲಕ್ಷ ಬಿಪಿಎಲ್ ಫಲಾನುಭವಿಗಳಿಗೆ 456 ಕೋಟಿ ರೂ. ಜಮಾ ಮಾಡಲಾಗಿದೆ.
24 ಜಿಲ್ಲೆಗಳ 78 ಲಕ್ಷ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಡಿ 456.73 ಕೋಟಿರೂ. ಜಮಾ ಮಾಡಲಾಗಿದೆ. ಇನ್ನುಳಿದ 7 ಜಿಲ್ಲೆಗಳಲ್ಲಿ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಇದನ್ನೂ ಓದಿ : ‘ಕೈ’ ಪಾಳೆಯದಲ್ಲಿ ಶುರುವಾಯ್ತು ಮೂಲ V/s ವಲಸಿಗ ಫೈಟ್
170 ಕೊಟ್ಟು ಕೈ ತೊಳೆದುಕೊಳ್ಳುತ್ತೇವೆ
ಹತ್ತು ಕೆಜಿ ಅಕ್ಕಿಯ ಗ್ಯಾರಂಟಿ ನೀಡಿ, ಮೋಸದಿಂದ ಅದನ್ನು ಐದು ಕೆಜಿಗೆ ಇಳಿಸಿ, ಅದನ್ನೂ ಕೊಡದೆ ಕೇವಲ 170 ಕೊಟ್ಟು ಕೈ ತೊಳೆದುಕೊಳ್ಳುತ್ತೇವೆ ಎಂದ ಸಿದ್ದರಾಮಯ್ಯರವರ ಸರ್ಕಾರ ಅದನ್ನೂ ನೀಡದೆ ಕೈ ಎತ್ತಿದೆ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.
ಹತ್ತು ಕೆಜಿ ಅಕ್ಕಿಯ ಗ್ಯಾರಂಟಿ ನೀಡಿ,
ಮೋಸದಿಂದ ಅದನ್ನು ಐದು ಕೆಜಿಗೆ ಇಳಿಸಿ,
ಅದನ್ನೂ ಕೊಡದೆ ಕೇವಲ ₹170 ಕೊಟ್ಟು ಕೈ ತೊಳೆದುಕೊಳ್ಳುತ್ತೇವೆ ಎಂದ @siddaramaiahರವರ ಸರ್ಕಾರ ಅದನ್ನೂ ನೀಡದೆ ಕೈ ಎತ್ತಿದೆ.ಹಣ ವರ್ಗಾಯಿಸಲೂ ಕಂಡೀಷನ್ಸ್ ಹಾಕುವ @INCKarnataka ಸರ್ಕಾರದಲ್ಲಿ ಅನ್‌ಕಂಡೀಷನಲ್ ಆಗಿ ನಿತ್ಯವೂ ನಡೆಯುವುದು ಕಲೆಕ್ಷನ್… pic.twitter.com/RmHi97RP4Y
— BJP Karnataka (@BJP4Karnataka) July 24, 2023
ಹಣ ವರ್ಗಾಯಿಸಲೂ ಕಂಡೀಷನ್ಸ್ ಹಾಕುವ ಕಾಂಗ್ರೆಸ್ ಸರ್ಕಾರದಲ್ಲಿ ಅನ್‌ಕಂಡೀಷನಲ್ ಆಗಿ ನಿತ್ಯವೂ ನಡೆಯುವುದು ಕಲೆಕ್ಷನ್ ವ್ಯವಹಾರ ಮಾತ್ರ. ಬಹುಶಃ, 12 ಜಿಲ್ಲೆಯವರ ಕಮಿಷನ್ ಸಂದಾಯ ಬಾಕಿ ಇರುವ ಕಾರಣ ಬಡಜನರ ಖಾತೆಗೆ ಎಟಿಎಂ ಸರ್ಕಾರ (ATM Sarkara) ಹಣ ಹಾಕುತ್ತಿಲ್ಲವೇನೋ ಎಂದು ಕುಟುಕಿದೆ.