Tuesday, January 7, 2025

🕚 JUST IN :

ಕುಡಿದ ಮತ್ತಿನಲ್ಲಿ ಕಲ್ಲು ಹಿಡಿದು ಹಲ್ಲೆಗೆ ಮುಂದಾದ ಆಫ್ರಿಕನ್​ ಮಹಿಳೆಯರು

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಫ್ರಿಕನ್ ಮಹಿಳೆಯರ ಉಪಟಳ ಮಿತಿಮೀರಿದ್ದು ಕುಡಿದ ಮತ್ತಿನಲ್ಲಿ ಸಿಕ್ಕಸಿಕ್ಕವರ ಮೇಲೆ ಕಲ್ಲು ಹಿಡಿದು ದಾಳಿಗೆ ಮುಂದಾಗಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಅಕ್ರಮ ಸಂಬಂಧ: ಜೆಡಿಎಸ್ ಮುಖಂಡನಿಗೆ ಸ್ಥಳೀಯರಿಂದ ಹಿಗ್ಗಾಮುಗ್ಗಾ ಥಳಿತ!

ಎಂ.ಜಿ.ರಸ್ತೆ, ಕಾವೇರಿ ಎಂಪೋರಿಯಂ ಸರ್ಕಲ್ ನಲ್ಲಿ ಮದ್ಯ ಮತ್ತು ಮಾದಕವಸ್ತುಗಳ ನಶೆಯಲ್ಲಿದ್ದ ಆಫ್ರಿಕನ್​ ಮಹಿಳೆಯರು ಕಲ್ಲಿನಿಂದ ಸಾರ್ವಜನಿಕರ ಹಲ್ಲೆಗೆ ಮುಂದಾಗಿದ್ದಾರೆ, ಇವರ ಈ ವರ್ತನೆಗೆ ಜನ ಹೈರಾಣಾಗಿದ್ದಾರೆ.

ಘಟನಾ ಸ್ಥಳಕ್ಕೆ ಹೊಯ್ಸಳ ಪೊಲೀಸರು ಬಂದರು ತಲೆಕೆಡಿಸಿಕೊಳ್ಳದೆ ಡ್ರಗ್ಸ್ ನಶೆಯಲ್ಲಿ ಸಾರ್ವಜನಿಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಪದೇ ಪದೇ ಈ ರೀತಿಯ ದುರ್ವತನೆಯನ್ನು ತೋರುತ್ತಿರುವ ಆಫ್ರಿಕನ್ ಮಹೀಳೆಯರ ನಡೆಗೆ ಜನರು ಹೈರಾಣಾಗಿದ್ದಾರೆ.

ಆಫ್ರಿಕನ್ ಮಹಿಳೆಯರು ನಡೆಸುತ್ತಿರುವ ದುಂಡಾವರ್ತನೆಯೂ ಸಾರ್ವಜನಿಕರ ಮೊಬೈಲ್ ನಲ್ಲಿ‌ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

RELATED ARTICLES

Related Articles

TRENDING ARTICLES