Wednesday, January 22, 2025

ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ!

ಕಲಬುರಗಿ : ಹಣಕಾಸು ವಿಚಾರಕ್ಕೆ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರ ಹತ್ಯೆ ಮಾಡಿರುವ ಘಟನೆ ಜೇವರ್ಗಿ ತಾ. ಮದರಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಜು.27ಕ್ಕೆ ಖಾಸಗಿ ಸಾರಿಗೆ​ ಬಂದ್​ : ಸಚಿವರೊಂದಿಗೆ ವಿವಿಧ ಸಂಘಗಳ ಸಭೆ ಬಳಿಕ ನಿರ್ಧಾರ!

ಅಶೋಕ್ ಪ್ಯಾಟಿ (44) ಕೊಲೆಯಾದ ವ್ಯಕ್ತಿ, ಹಣಕಾಸು ವಿಚಾರದಲ್ಲಿ ಮೃತ ಅಶೋಕ್​ ಮತ್ತು ಗುಂಡಪ್ಪ ಹಾಲಗಡ್ಲಿ, ಸೋಮು, ಜಾನಪ್ಪ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ,

ಘಟನೆಯ ಹಿನ್ನೆಲೆ: ಜಾನಪ್ಪ ಎನ್ನುವ ವ್ಯಕ್ತಿಯು ತನ್ನ ಚಿಕ್ಕಮ್ಮಳಿಗೆ 50 ಸಾವಿರ ಹಣವನ್ನು ನೀಡಿದ್ದ, ಆ, 50 ಸಾವಿರ ಹಣವನ್ನು ಜಾನಪ್ಪನ ಚಿಕ್ಕಮ್ಮ ಅಶೋಕ್​ ಗೆ ನೀಡಿದ್ದರು, ಈ ಹಣವನ್ನು ವಾಪಾಸ್​ ಕೊಡುವಂತೆ ಜಾನಪ್ಪ ಅಶೋಕ್​ ನನ್ನು ಕೇಳಿದ್ದಾನೆ, ಇದೇ ವಿಚಾರಕ್ಕೆ ಜಗಳ ಆರಂಭವಾಗಿದೆ ಜಗಳ ವಿಕೋಪಕ್ಕೆ ತಿರುಗಿ ಗುಂಡಪ್ಪ ಹಾಲಗಡ್ಲಿ, ಸೋಮು, ಜಾನಪ್ಪ ಸೇರಿ ಆಶೋಕ್​ ಕೊಲೆ ಮಾಡಿದ್ದಾರೆ.

ಘಟನೆಯಲ್ಲಿ ನಾಲ್ವರಿಗೂ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಸದ್ಯ ಈ ಪ್ರಕರಣವು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

RELATED ARTICLES

Related Articles

TRENDING ARTICLES