ಕಲರ್ಬುಗಿ : ನಿರಂತರ ಮಳೆಯಿಂದಾಗಿ ತಗ್ಗುಗುಂಡಿಯಲ್ಲಿ ತುಂಬಿದ್ದ ನೀರನ್ನು ಗಮನಿಸದೇ ಗುಂಡಿಯಲ್ಲಿ ಬಿದ್ದು ಇಬ್ಬರು ಸಾವಿಗೀಡಾದ ಧಾರುಣಘಟನೆ ಕಲಬುರಗಿ ನಗರದ ದುಬೈ ಕಾಲೋನಿಯ ಬಳಿ ನೆಡೆದಿದೆ.
ಇತ್ತ ರಾಜ್ಯದಲ್ಲಿ ಹೆಚ್ಚಾಗಿ ಮಳೆಯಾಗುತ್ತಿರುವ ಹಿನ್ನೇಲೆ ಎಲ್ಲಾ ಕಡೆಯಲ್ಲು ಕೆರೆಗಳು, ಗುಂಡಿಗಳು ತುಂಬಿ ಹೋಗುತ್ತಿವಿ. ಅದರ ಬೆನ್ನಲ್ಲೇ ಕಲರ್ಬುಗಿಯಲ್ಲೊಂದು ದುರ್ಘಟನೆ ನೆಡೆದಿದೆ. ನಗರದ ದುಬೈ ಕಾಲೋನಿಯ ಬಳಿ ಓವರ್‌ಹೆಡ್ ನೀರಿನ ಟ್ಯಾಂಕ್ ನಿರ್ಮಿಸಲಾಗುತ್ತಿತ್ತು, ನೀರಿನ ಟ್ಯಾಂಕ್ ಸುತ್ತಮುತ್ತ 15 ಅಡಿ ಗುಂಡಿ ತೋಡಲಾಗಿತ್ತು, ಹೆಚ್ಚಾಗಿ ಮಳೆಯಾಗಿದ್ದ ಹಿನ್ನೇಲೆ ಮಳೆ ನೀರಿನಿಂದ ತಗ್ಗುಗುಂಡಿ ಸಂಪೂರ್ಣ ಭರ್ತಿಯಾಗಿದೆ.
ನಿನ್ನೆ ಮಧ್ಯಾನದಿಂದ ನಾಪತ್ತೆಯಾಗಿದ್ದ ಯುವಕರು
ಈ ವೇಳೆಯಲ್ಲಿ ನಿನ್ನೇ ಆ ಗುಂಡಿಯ ಬಳಿ ಹೊಗುತ್ತಿದ್ದ ಅಭಿ(11), ಹಾಗೂ ಅಜಯ್ (12) ಮೃತ ದುರ್ದೈವಿಗಳು ಗುಂಡಿಯಲ್ಲಿ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ನಿನ್ನೇ ಮಧ್ಯಾನದಿಂದ ನಾಪತ್ತೆಯಾದ ಕಾರಣ ಇಬ್ಬರು ಬಾಲಕರನ್ನು ಕುಟುಂಬಸ್ಥರು ಹುಡುಕಾಟ ನೆಡೆಸಿದ ವೇಳೆ ನೀರಿನ ಟ್ಯಾಂಕ್ ಬಳಿ ಶವ ಪತ್ತೆಯಾಗಿವೆ.
ಇದನ್ನು ಓದಿ :ನಿರಂತರ ಮಳೆಗೆ ಸೋಯಾಬಿನ್ ಬೆಳೆ ನಾಶ: ಕಂಗಾಲಾದ ರೈತರು!
ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಹಾಗೂ ಚೌಕ್ ಪೊಲೀಸರ ಭೇಟಿ, ಬಳಿಕ ಪತ್ತೆ ನೆಡೆಸಿದ ವೇಳೆ ಓರ್ವ ಬಾಲಕನ ಮೃತದೇಹ ಪತ್ತೆಯಾಗಿದೆ, ಮತ್ತೋರ್ವ ಬಾಲಕನ ಮೃತದೇಹ ಸಿಗದೆ ಇರುವ ಹಿನ್ನೇಲೆ ಹುಡುಕಾಟ ನಡೆಸಿರುವ ಕುಟುಂಬಸ್ಥರು ಮತ್ತು ಪೋಲಿಸರು.