Monday, December 23, 2024

ಗೃಹಲಕ್ಷ್ಮಿಗೆ ಅರ್ಜಿಸಲ್ಲಿಸುವ ಪ್ರಕ್ರಿಯೆ ಇಂದು ಸ್ಥಗಿತ !

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದು ಸ್ಥಗಿತಗೊಂಡಿದ್ದು, ಭಾನುವಾರ ಅರ್ಜಿಸಲ್ಲಿಸಲು ಕಾಯುತ್ತಿದ್ದ ಜನರಿಗೆ ನಿರಾಸೆ ಎದುರಾಗಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಗ್ಯಾಸ್​ ಕಟರ್​ ಬಳಸಿ ಎಟಿಎಂ ನಲ್ಲಿದ್ದ ಹಣ ದೋಚಿದ ಖತರ್ನಾಕ್​ ಕಳ್ಳರು! 

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ವರ್​ ಡೌನ್​ನ ತಾಂತ್ರಿಕ ದೋಷಗಳು ಎದುರಾಗಿದ್ದು ಅರ್ಜಿಸಲ್ಲಿಸುವವರಿಗೆ ಮೆಸೇಜ್ ಬರದೇ ಸಾರ್ವಜನಿಕರ ಪರದಾಡಿದ್ದರು, ಈ ಹಿನ್ನೆಲೆ ಸಾಫ್ಟ್ವೇರ್ ಆಪ್‌ಡೇಟ್ ಕಾರ್ಯ ನಡೆಯುತ್ತಿರುವುದರಿಂದ ಇಂದು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ.

ಎಲ್ಲಾ  ಬೆಂಗಳೂರು ಒನ್, ಗ್ರಾಮ ಒನ್‌ಗಳಲ್ಲಿ  ತಾಂತ್ರಿಕ ದೋಷ ಎದುರಾದ ಹಿನ್ನೆಲೆ ಅರ್ಜಿಸಲ್ಲಿಸುವ ಪ್ರಕ್ರಿಯೆ ಸ್ಥಗಿಗೊಳಿಸಲಾಗಿದೆ ಎನ್ನುವ ಪೋಸ್ಟರ್ ಅಂಟಿಸಲಾಗಿದೆ. ಸೋಮವಾರ ಬೆಳ್ಳಿಗೆ 8 ಗಂಟೆಯಿಂದ ಮತ್ತೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಇಲಾಖೆ ತಿಳಿಸಿದೆ.

RELATED ARTICLES

Related Articles

TRENDING ARTICLES