Wednesday, January 22, 2025

ಪ್ರಿಯತಮನಿಗೆ ಚಾಕು ಇರಿದ ಪ್ರೇಯಸಿ!

ಬೆಂಗಳೂರು: ಪ್ರೇಯಸಿಯಿಂದ ಅಂತರ ಕಾಯ್ದುಕೊಂಡಿದ್ದಕ್ಕೆ ಪ್ರಿಯಕರನಿಗೆ, ಯುವತಿಯು ಚಾಕು ಇರಿದು ಪರಾರಿಯಾಗಲು ಯತ್ನಿಸಿದ ಘಟನೆ ಬೆಂಗಳೂರಿನ ವಿವೇಕನಗರದಲ್ಲಿ ನಡೆದಿದೆ.

ಇದನ್ನೂ ಓದಿ: ಗೃಹಲಕ್ಷ್ಮಿಗೆ ಅರ್ಜಿಸಲ್ಲಿಸುವ ಪ್ರಕ್ರಿಯೆ ಇಂದು ಸ್ಥಗಿತ !

ಜೋಗೇಶ್​ ಯುವತಿಯಿಂದ ಚಾಕು ಇರಿತಕ್ಕೊಳಗಾದ ಪ್ರೇಮಿ, ಬರೂತಿ ಜಂಟಿ ದಾಸ್ ಯುವಕನಿಗೆ ಚಾಕು ಇರಿದು ಪರಾರಿಗಿದ್ದ ಯುವತಿ, ಇತ್ತೀಚೆಗೆ ಪ್ರೇಯಸಿಯಿಂದ ಅಂತರ ಕಾಯ್ದುಕೊಂಡಿದ್ದ ಕಾರಣಕ್ಕೆ ಪ್ರಿಯಕರನ ವರ್ತನೆಗೆ ಬೇಸತ್ತ ಬರೂತಿ ಜಂಟಿ ದಾಸ್​   ಪ್ರಿಯಕರನ ಮನೆಯಲ್ಲೇ ಗಲಾಟೆ ಮಾಡಿ ಚಾಕು ಇರಿದಿದ್ದಾಳೆ. ಗಾಯಾಳು ಜೋಗೇಶ್​ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಅಸ್ಸಾಂ ಮೂಲದ ಪ್ರೇಮಿಗಳು ಬೆಂಗಳೂರಿನಲ್ಲಿ ವಾಸವಿದ್ದರು, ಬರೂತಿ ದಾಸ್​ ಇಲ್ಲಿನ ಡೇ ಕೇರ್‌ನಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದರೆ, ಜೋಗೇಶ್​ ಸೆಕ್ಯೂರಿಟಿ ಗಾರ್ಡ್​ ಆಗಿ ಕೆಲಸ ಮಾಡುತ್ತದ್ದ.  ಆರೋಪಿ ಮಹಿಳೆಗೆ ಈ ಮೊದಲು ಮದುವೆಯೂ ಆಗಿತ್ತು, ಈ ನಡುವೆ ಮಹಿಳೆ ಜೊತೆ ಜೋಗೇಶ್​​​ಗೆ ಪ್ರೇಮಾಂಕುರವಾಗಿತ್ತು, ಪ್ರೇಯಸಿ ಬರೂತಿ ಬಳಿ ಸಾಕಷ್ಟು ಹಣವನ್ನೂ ಪಡೆದಿದ್ದ ಈತ ಬಳಿಕ ಅಂತರ ಕಾಯ್ದುಕೊಳ್ಳಲು ಯತ್ನಿಸಿದ್ದ ಇದಕ್ಕೆ ರೋಸಿಹೋದ ಬರೂತಿ ದಾಸ್​, ಅತ್ತ ಪ್ರೀತಿನೂ ಇಲ್ಲ, ಇತ್ತ ಹಣವೂ ಇಲ್ಲ ಎಂದು ಗಲಾಟೆ ತೆಗೆದು ಹೊಟ್ಟೆಗೆ ಚಾಕು ಇರಿದು ಪರಾರಿಯಾಗಿದ್ದಳು.

ಸದ್ಯ ಆರೋಪಿ ಬರೂತಿ ಜಂಟಿ ದಾಸ್​ ಳನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ.

RELATED ARTICLES

Related Articles

TRENDING ARTICLES