Monday, December 23, 2024

ಲೇಡೀಸ್ ಟಾಯ್ಲೆಟ್ನಲ್ಲಿ ಮೊಬೈಲಿಟ್ಟು ಚಿತ್ರೀಕರಿಸಿದ ವಿದ್ಯಾರ್ಥಿನಿಯರು!

ಉಡುಪಿ: ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ಮಾಡಿದ ಹಿನ್ನೆಲೆಯಲ್ಲಿ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿದ ಘಟನೆ ಇಲ್ಲಿನ ಖಾಸಗಿ ನೇತ್ರ ಕಾಲೇಜಿನಲ್ಲಿ ನಡೆದಿದೆ.

ಇದನ್ನೂ ಓದಿ: ಮಣಿಪುರದಂತೆ ಮಹಿಳೆಯರನ್ನು ಅರೆಬೆತ್ತಲೆಗೊಳಿಸಿ ಭೀಕರ ಹಲ್ಲೆ!

ಮೂವರು ವಿದ್ಯಾ ರ್ಥಿನಿಯರು ಸೇರಿ ಮಹಿಳಾಶೌಚಾಲಯದಲ್ಲಿ ಮೊಬೈಲ್‌ ಅಡಗಿಸಿಟ್ಟು ವಿಡಿಯೋ ಚಿತ್ರೀಕರಣ ಮಾಡಿದ್ದರು ಎನ್ನಲಾಗಿದ್ದು, ಈ ಕೃತ್ಯ ಅರಿವಿಗೆ ಬಂದ ಬಳಿಕ ಹಿಂದೂ ವಿದ್ಯಾರ್ಥಿನಿ ಯರು ಮೊಬೈಲ್‌ ಇಟ್ಟಿದ್ದ ವಿದ್ಯಾರ್ಥಿಯರೊಂದಿಗೆ ಕಾಲೇಜಿನಲ್ಲಿ ಗಲಾಟೆ ನಡೆಸಿದ್ದಾರೆ.ವಿಷಯತಿಳಿದು ಮಧ್ಯೆ ಪ್ರವೇಶಿಸಿದಕಾಲೇಜು ಆಡಳಿತಮಂಡಳಿಯು ಆ ಮೂವರೂ ಮುಸ್ಲಿಂ ವಿದ್ಯಾರ್ಥಿನಿಯರನ್ನು ಅಮಾನತು ಮಾಡಿ ಕ್ರಮ ಕೈಗೊಂಡಿದೆ.

ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಹಿಂದೂ ಸಂಘಟನೆಗಳು ವಿದ್ಯಾರ್ಥಿನಿಯರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ, ಪ್ರಕರಣ ದಾಖಲಿಸುವಂತೆ ಕಾಲೇಜು ಆಡಳಿತ ಮಂಡಳಿಗೆ ಒತ್ತಾಯಿಸಿವೆ.

RELATED ARTICLES

Related Articles

TRENDING ARTICLES