ಧಾರವಾಡ : ಧಾರವಾಡ ಜಿಲ್ಲೆಯಾದ್ಯಂತ ವರಣುನ ಆರ್ಭಟ ಮುಂದುವರೆದಿದ್ದು ತಗ್ಗು ಪ್ರದೇಶದಲ್ಲಿ ಬೆಳೆದ ಕೃಷಿ ಬೆಳೆ ಸಂಪೂರ್ಣ ಜಲಾವೃತವಾಗಿರುವ ಘಟನೆ ತಾಲ್ಲೂಕಿನ ನವಲೂರು ಗ್ರಾಮದಲ್ಲಿ ನಡೆದಿದೆ ಬೆಳೆ ನಾಶಕ್ಕೆ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ಇದನ್ನೂ ಓದಿ: ಪ್ರಿಯತಮನಿಗೆ ಚಾಕು ಇರಿದ ಪ್ರೇಯಸಿ!
ಕಳೆದ ಐದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮದ ರೈತರು ಬೆಳೆದ ಸೋಯಾಬಿನ್, ಶೇಂಗಾ ಸೇರಿ ತರಕಾರಿ ಬೆಳೆಗಳು ಸಂಪೂರ್ಣ ಜಲಾವೃತವಾಗಿದೆ, ಸಾಲಾಸೋಲ ಮಾಡಿ ಮುಂಗಾರು ಬೆಳೆ ಬಿತ್ತನೆ ಮಾಡಿರುವ ರೈತರಿಗೆ ತಮ್ಮ ಬೆಳೆ ಕೈತಪ್ಪುವ ಭೀತಿ ಎದುರಾಗಿದೆ.
ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಂಗಾಲಾಗಿರುವ ರೈತರು ಮಳೆ ಬೀಡುವಿಗಾಗಿ ಎದುರು ನೋಡುತ್ತಿದ್ದು, ಬೆಳೆ ಹಾನಿಯಿಂದ ರೈತರು ನಷ್ಟಕ್ಕೊಳಗಾಗಿದ್ದಾರೆ, ಬೆಳೆಹಾನಿಗೆ ಸರ್ಕಾರ ಪರಿಹಾರ ನೀಡುವಂತೆ ಗ್ರಾಮದ ರೈತರು ಆಗ್ರಹಿಸುತ್ತಿದ್ದಾರೆ.