Wednesday, January 22, 2025

ಬೆಳ್ಳಂಬೆಳಗ್ಗೆ ಗ್ಯಾಸ್​ ಕಟರ್​ ಬಳಸಿ ಎಟಿಎಂ ನಲ್ಲಿದ್ದ ಹಣ ದೋಚಿದ ಖತರ್ನಾಕ್​ ಕಳ್ಳರು!

ಕಲಬುರಗಿ : ಗ್ಯಾಸ್​ ಕಟರ್ ಬಳಸಿ ಎಟಿಎಂ ಯಂತ್ರದಲ್ಲಿದ್ದ ಹಣ ಕದ್ದ ಕಳ್ಳರು ಪರಾರಿಯಾಗಿರುವ ಘಟನೆ ಅಫಜಲ್​ಪುರ ಪಟ್ಟಣದಲ್ಲಿ ಇಂದು ಬೆಳ್ಳಂಬೆಳಗ್ಗೆ ನಡೆದಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಅರ್ಜಿಸಲ್ಲಿಕೆಗೆ ಹಣ ಪಡೆದ ಆರೋಪ : ಗ್ರಾಮ ಒನ್​ ಕೇಂದ್ರದ ಲಾಗಿನ್​ ಐಡಿ ರದ್ದಿಗೆ…

ಪಟ್ಟಣದ ಕೆನರಾ ಬ್ಯಾಂಕ್​ ಎಟಿಎಂ ಬಳಿಗೆ ಇಂದು ಬೆಳಗ್ಗೆ 4 ಗಂಟೆ ಸುಮಾರಿನಲ್ಲಿ ಬೊಲೆರೋ ವಾಹನದಲ್ಲಿ ಬಂದ ಕಳ್ಳರು, ಎಟಿಎಂ ಹೊರಗಡೆ ಅಳವಡಿಸಿದ್ದ ಸಿಸಿ ಕ್ಯಾಮರಾಗೆ ಮಂಜು ಕವಿಯುವ ಹಾಗೆ ಸ್ಪ್ರೇ ಮಾಡಿದ್ದಾರೆ, ಬಳಿಕ ಗ್ಯಾಸ್​ ಕಟರ್ ಬಳಸಿ ಎಟಿಎಂ ಶಟರ್​ ಮುರಿದು ಒಳ ನುಗ್ಗಿ ಎಟಿಎಂ ಯಂತ್ರದಲ್ಲಿದ್ದ 13 ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ.

ಈ ಕುರಿತು ಅಫಜಲಪುರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಪೊಲೀಸರು ದಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES