Wednesday, January 22, 2025

ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ : ಚಿಪ್ಸ್​ ಫ್ಯಾಕ್ಟರಿ ಬೆಂಕಿಗಾಹತಿ!

ಮಂಡ್ಯ : ನಗರದ ಸಾಹುಕಾರ್​ ಚನ್ನಯ್ಯ ಬಡವಣೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಚಿಪ್ಸ್ ಫ್ಯಾಕ್ಟರಿ ಮತ್ತು ಗೋದಾಮು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಭಾರತದ ಟಾಪ್ 10 ಸರ್ಕಾರಿ ಸಾರಿಗೆ ಸಂಸ್ಥೆ ಯಾವುದು ಗೊತ್ತಾ..?

ಉಮೇಶ್ ಎಂಬುವವರಿಗೆ ಸೇರಿದ ಚಿಪ್ಸ್ ಫ್ಯಾಕ್ಟರಿ ಇದಾಗಿದ್ದು, ಬೆಂಕಿ ಅವಘಡದಿಂದಾಗಿ ಸುಮಾರು 15 ಲಕ್ಷ ಬೆಲೆ ಬಾಳುವ ಸಾಮಾಗ್ರಿಗಳು ಭಸ್ಮವಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ಮೂಲಕ ಬೆಂಕಿ ನಿಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಕಿ ಅವಘಡದಿಂದಾಗಿ ಅಪಾರ ಪ್ರಮಾಣ ಆಸ್ತಿ ಉಂಟಾಗಿದ್ದು ಚಿಪ್ಸ್​ ಕಾರ್ಖಾನೆ ಮಾಲೀಕ ಉಮೇಶ್ ದಿಕ್ಕೇ ತೋಚದಂತೆ ಕಂಗಾಲಾಗಿ ಕುಳಿತಿದ್ದಾರೆ. ಈ ಪ್ರಕರಣವು ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES

Related Articles

TRENDING ARTICLES