Monday, December 23, 2024

ಕಾದು ನೋಡಿ‌.. ರಾಜಕಾರಣ ಏನೇನು ಆಗುತ್ತೆ : ಹೊಸ ಬಾಂಬ್ ಸಿಡಿಸಿದ ಹರಿಪ್ರಸಾದ್

ಬೆಂಗಳೂರು : ನಿನ್ನೆ ನಾನು ಹೇಳಿದ್ದು ನಿಜ, ನಾನು ಒಪ್ಪಿಕೊಳ್ಳುತ್ತೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಮಾಧಾನದ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಒಂದು ಬಾರಿ ಹೇಳಿದ ಮಾತು ವಾಪಾಸ್ ತಗೆದುಕೊಳ್ಳೋದಿಲ್ಲ. ನಾನು ಹೇಳಿದ ಮಾತಿಗೆ ಬದ್ದನಾಗಿರುತ್ತೇನೆ ಎಂದು ತಿಳಿಸಿದರು.

ಕಾದು ನೋಡಿ‌ ರಾಜಕಾರಣ ಏನೇನು ಆಗುತ್ತೆ

ನಾನು ಹೇಳದ ಮೇಲೆ ನನ್ನ ಮಾತಲ್ಲ. ನಾನು ಹೇಳಿದ ಮೇಲೆ‌  ನನ್ನ ಮಾತಿಗೆ ಬದ್ದನಾಗಿರುತ್ತೇನೆ. ನಿನ್ನೆ ಸಭೆಗೆ ಕರೆದಿದ್ದರು ಹೋಗಿದ್ದೆ ಅಷ್ಟೇ. ಅಲ್ಲಿ ಕ್ಯಾಮರಾಗಳು ಇರಲಿಲ್ಲ ಮಾತಾಡಿದ್ದೇನೆ. ಕ್ಯಾಮರಾಗಳು ಇದ್ದಿದ್ದರೆ ಮಾತನಾಡುತ್ತಿರಲಿಲ್ಲ. ನಾವು ಹಿಂದುಳಿದವರು, ಅಷ್ಟೆಲ್ಲಾ‌ ಗಮನಿಸಿಲ್ಲ‌ ಯಾರೋ ಹಾಕಿರುತ್ತಾರೆ. ಕಾದು ನೋಡಿ‌ ರಾಜಕಾರಣ ಏನೇನು ಆಗುತ್ತೆ ಎಂದು ಹೊಸ ಬಾಂಬ್ ಸಿಡಿಸಿದರು.

ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಅವರು ಬಿ.ಕೆ ಹರಿಪಸ್ರಾದ್ ಭೇಟಿ ಮಾಡಿದ್ದಾರೆ. ನಿನ್ನೆಯಷ್ಟೇ ಸ್ವಾಮೀಜಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ವಿರುದ್ಧ ಹರಿಪಸ್ರಾದ್ ಗುಡುಗಿದ್ದರು. ಇದೀಗ ಹರಿಪಸ್ರಾದ್ ಹೇಳಿಕೆ ದೊಡ್ಡ ಸುದ್ದಿಯಾಗುತ್ತಿದ್ದಂತೆ ಶ್ರೀಗಳು ಆಗಮಿಸಿದ್ದಾರೆ. ಸೆವೆನ್ ಮಿನಿಸ್ಟರ್ ಕ್ವಾಟ್ರಸ್ ನ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES