Monday, December 23, 2024

ಗೃಹಜ್ಯೋತಿ : ಉಚಿತ ವಿದ್ಯುತ್​ ಸೌಲಭ್ಯಕ್ಕೆ ಅರ್ಜಿಸಲ್ಲಿಸಲು ಡೆಡ್​ ಲೈನ್​ ಫಿಕ್ಸ್ ಮಾಡಿದ ಇಂಧನ ಇಲಾಖೆ !

ಬೆಂಗಳೂರು : ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್​ ಸೌಲಭ್ಯ ನೋಂದಣಿಗೆ ಸರ್ಕಾರ ಡೆಡ್‌ಲೈನ್ ನಿಗಧಿ ಮಾಡಿದ್ದು ಜುಲೈ 27 ರ ಒಳಗೆ ಅರ್ಜಿ ಸಲ್ಲಿಸಲು ಇಂಧನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಪಿಎಸ್ಐ ಅಕ್ರಮ : ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಸರ್ಕಾರ ಆದೇಶ

ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಗಳಲ್ಲಿ ಒಂದಾಗ ಗೃಹಜ್ಯೋತಿ ನೋಂದಣಿಗೆ ಇಂಧನ ಇಲಾಖೆ ಅಂತಿಮ ದಿನಾಂಕ ನಿಗಧಿ ಮಾಡಿದ್ದು ಜುಲೈ 27ರ ಒಳಗೆ ಅರ್ಜಿಸುವಂತೆ ತಿಳಿಸಿದೆ. ಜುಲೈ ತಿಂಗಳ ಉಚಿತ 200 ಯೂನಿಟ್ ವಿದ್ಯುತ್ ಸೌಲಭ್ಯ ಪಡೆಯಲು ಅರ್ಜಿಸಲ್ಲಿಕೆಗೆ ಇನ್ನು 6 ದಿನ ಮಾತ್ರ ಬಾಕಿ ಇದ್ದು ಜುಲೈ 27ರ ನಂತರ ಅರ್ಜಿಸಲ್ಲಿಕೆಯಾದರೇ ಜುಲೈ ತಿಂಗಳಲ್ಲಿ ಬಳಕೆಯಾದ ಬಿಲ್​ನ ಉಚಿತ ವಿದ್ಯುತ್​ ಸೌಲಭ್ಯ ಸಿಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.

ಈಗಾಗಲೇ ಜುಲೈ ತಿಂಗಳ ಉಚಿತ ವಿದ್ಯುತ್ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ್ದರು ಒಮ್ಮೆ ಸ್ಟೇಟಸ್​ ಪರಿಶೀಲಿಸಿಕೊಳ್ಳುವಂತೆಯೂ ಇಂಧನ ಇಲಾಖೆ ತಿಳಸಿದೆ.

RELATED ARTICLES

Related Articles

TRENDING ARTICLES