Monday, January 27, 2025

ಪ್ರಿಯಕರನಿಗೆ ಥಳಿಸಿ ತಾಳಿ ಕಟ್ಟಿಸಿಕೊಂಡ ಪ್ರಿಯತಮೆ!

ಚಿಕ್ಕಬಳ್ಳಾಪುರ: ಪ್ರೀತಿಸಿ ಕೈ ಕೊಟ್ಟು ಪರಾರಿಯಾಗುತ್ತಿದ್ದ ಪ್ರಿಯಕರನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಪ್ರಿಯತಮೆ ಆತನ ಕೈಯಿಂದಲೇ ತಾಳಿ ಕಟ್ಟಿಸಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದಿದೆ.

ಇದನ್ನೂ ಓದಿ: ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇಂದು ಬಿಜೆಪಿ ಪಕ್ಷದಿಂದ ಪ್ರತಿಭಟನೆ!

ಶಿಡ್ಲಘಟ್ಟ ತಾಲೂಕಿನ ಚಿಕ್ಕಕಿರಿಗಿಂಬಿ ಗ್ರಾಮದ ಚೇತನ್ ಹಾಗೂ ಇಟಪನಹಳ್ಳಿಯ ವನಿತಾ ಎರಡು ವರ್ಷಗಳಿಂದ ಪ್ರೀತಿಸುತಿದ್ದರು. ಇದರ ಫಲವಾಗಿ ವನಿತಾ ಆರು ತಿಂಗಳ ಗರ್ಭಿಣಿಯಾಗಿದ್ದಾಳೆ. ಇದರಿಂದ ದಿಕ್ಕು ತೋಚದ ಸ್ಥಿತಿಯಲ್ಲಿದ್ದ ಯುವತಿಯನ್ನು ಕಂಡ ಸಂಘ ಸಂಸ್ಥೆಗಳು ಯುತಿಯ ಬೆಂಬಲಕ್ಕೆ ನಿಂತಿವೆ, ಇದಕ್ಕೆ ಸಂಬಂಧಿಸಿದ ವೀಡಿಯೋಂದು ಸದ್ಯ ವೈರಲ್​ ಆಗುತ್ತಿದೆ,

ಪ್ರೀತಿಸಿದ ಯುವಕನ ಜೊತೆ ಮಾಡಲು ಯುವತಿಯ ಪಾಲಕರು ಪ್ರಿಯಕರನ್ನನ್ನು ಮತ್ತು ಆತನ ಕುಟುಂಬದವರನ್ನು ಮಾತುಕತೆಗೆ ಕರೆದಿದ್ದರು, ಈ ವೇಳೆ ಪ್ರಿಯಕರ, ನನ್ನಿಂದಲೇ ಗರ್ಭಿಣಿಯಾಗಿದ್ದಾಳೆ ಎನ್ನುವುದಕ್ಕೆ ಏನು ಸಾಕ್ಷಿ? ಎಂದು ವಾದಕ್ಕೆ ಇಳಿದಿದ್ದ ಇದಕ್ಕೆ ರೊಚ್ಚಿಗೆದ್ದ ಯುವತಿಯೂ ಹುಡುಗನ್ನು ಹಿಡಿದು ಥಳಿಸಿದ್ದಾಳೆ. ಬಳಿಕ ಚಿಕ್ಕಬಳ್ಳಾಪುರ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆ ಮಾಡಿಸಿದ್ದಾರೆ.

ವಿವಾಹ ನೋಂದಣಿಗೆ ಕರೆದೊಯ್ದ ವೇಳೆ ಯುವಕನಿಗೆ ಈಗಾಗಲೇ ಮದುವೆಯಾಗಿರುವುದು ಬೆಳಕಿಗೆಬಂದಿದೆ.

RELATED ARTICLES

Related Articles

TRENDING ARTICLES