Wednesday, January 22, 2025

ಸಚಿವ ಸ್ಥಾನಕ್ಕೆ ಯಾರಾದ್ರು ಭಿಕ್ಷೆ ಬೇಡ್ತಾರಾ? : ಶರಣಬಸಪ್ಪ ದರ್ಶನಾಪುರ

ಯಾದಗಿರಿ : ಸಚಿವ ಸ್ಥಾನಕ್ಕೆ ಯಾರಾದ್ರು ಭಿಕ್ಷೆ ಬೇಡ್ತಾರಾ? ಸಚಿವ ಸ್ಥಾನ ಸಿಕ್ಕವರೆ ಅರ್ಹರು, ಸಿಗದೆ ಇರೋರು ಅನರ್ಹರು ಅಂತೇನಿಲ್ಲ ಎಂದು ಬಿ.ಕೆ ಹರಿಪ್ರಸಾದ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ನಯವಾಗಿಯೇ ಕುಟುಕಿದರು.

ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಕೆ ಹರಿಪ್ರಸಾದ್ ಹೇಳಿಕೆ ನಾನು ನೋಡಿಲ್ಲ, ನೋಡದೇ ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಕರ್ನಾಟಕದ ಹಿಂದುಳಿದ ನಾಯಕ. ಯಾರಿಗೂ ಹಿಂದೂಳಿದ ನಾಯಕರಿಗೆ ತುಳಿಯುವ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ‌. ಎಲ್ಲ ಸಮುದಾಯವರನ್ನು ಕಾಂಗ್ರೆಸ್ ಪಕ್ಷ ತೆಗೆದುಕೊಂಡು ಹೊಗುತ್ತೆ. ಆಯಾ ಜಿಲ್ಲೆ, ಹಿರಿತನದ ಮೇಲೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಈಡಿಗ ಸಮುದಾಯದ ಮದು ಬಂಗಾರಪ್ಪ ಸಚಿವರಾಗಿಲ್ವಾ? ಎಂದು ಚಾಟಿ ಬೀಸಿದರು.

ಇದನ್ನೂ ಓದಿ : ಬಹಳ ನೋವಿನಿಂದ ಅಮಾನತು ಮಾಡಿದ್ದೇನೆ : ಯು.ಟಿ ಖಾದರ್

ಸಿಎಂ ಆಗಲು ಒಬ್ಬರಿಂದ ಸಾಧ್ಯವಿಲ್ಲ

ಬಹಳ ವರ್ಷದ ಬಳಿಕ ಕರ್ನಾಟಕದಲ್ಲಿ ಜನ ಸುಭದ್ರವಾದ ಸರ್ಕಾರ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಆಗಲು ಒಬ್ಬರಿಂದ ಸಾಧ್ಯವಿಲ್ಲ. ಜನ ವೋಟು ಹಾಕಿದ್ರೆ ನಮಗೆ ಸಂಖ್ಯೆ ಬರುತ್ತೆ, ಹನಿ ಹನಿ ಕೂಡಿದ್ರೆ ಹಳ್ಳ ಆಗೋದು. ಪಕ್ಷ ಅಂದ ಮೇಲೆ ಎಲ್ಲರ ಕೊಡುಗೆ ಇರುತ್ತೆ. ಸಾಕಷ್ಟು ಜನರು ಅರ್ಹರು ಇದ್ದಾರೆ. ಆದರೆ, ಎಲ್ಲರಿಗೂ ಸಮಧಾನ ಮಾಡಲು ಆಗಲ್ಲ ಎಂದು ಹೇಳಿದರು.

ಯಾರಿಗೆ ಸಹಾಯ ಮಾಡೋಕೆ ಆಗಲ್ಲ

ಮೂರು ವಾರ ಸದನ ನಡೆದ್ರು ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಆಗಿಲ್ಲ. ನಮ್ಮ ನಾಯಕರು, ರಾಷ್ಟ್ರೀಯ ನಾಯಕರು ಬಿ.ಕೆ ಹರಿಪ್ರಸಾದ್ ಜೊತೆ ಮಾತನಾಡ್ತಾರೆ. ಯಾರು ಯಾರಿಗೆ ಸಹಾಯ ಮಾಡಲು ಆಗಲ್ಲ. ನಮ್ಮ ಶಕ್ತಿ ಸಾಮರ್ಥ್ಯ ಮೇಲೆ, ಮೇಲೆ ಬರೋಕೆ ಸಾಧ್ಯ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES