ಹಾವೇರಿ : ರಾಜ್ಯದಲ್ಲಿ ಕೊಳೆತ ಮೊಟ್ಟೆಗಳ ಭಾಗ್ಯ ಮುಂದುವರೆದಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ.
ಹಾವೇರಿಯಲ್ಲಿನ ಅಂಗನವಾಡಿಯಲ್ಲಿ ಕೊಳೆತ ಮೊಟ್ಟೆ ಪೂರೈಸಲಾಗಿದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ನೂಕಾಪುರ ತಾಂಡಾದಲ್ಲಿ ಕೊಳೆತ ಮೊಟ್ಟೆ ಪತ್ತೆಯಾಗಿದೆ.
ಅಂಗನವಾಡಿ ಕೇಂದ್ರಕ್ಕೆ ವಿತರಿಸಿದ ಮೊಟ್ಟೆ ಕೆಟ್ಟುಹೋಗಿವೆ. ಕಳೆದ 2 ದಿನಗಳ ಹಿಂದೆ ಕೊಳೆತ ಮೊಟ್ಟೆಗಳು ಸಿಕ್ಕಿವೆ. ಕೆಟ್ಟ ವಾಸನೆಯಿಂದ ಪೋಷಕರಲ್ಲಿ ಆತಂಕ ಶುರುವಾಗಿದೆ. ಅಂಗನವಾಡಿಗೆ ತೆರಳದಂತೆ ಪೋಷಕರು ಮಕ್ಕಳನ್ನ ತಡೆಯುತ್ತಿದ್ದಾರೆ.
ಗರ್ಭಿಣಿಯರು, ಮಕ್ಕಳಿಗೆ ನೀಡುವ ಮೊಟ್ಟೆ ಹಾಳಾಗಿದ್ದು, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಸರ್ಕಾರ ಮಾತ್ರ ಈ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿಲ್ಲ.
ಹಾಸನದಲ್ಲೂ ಕೊಳೆತ ಮೊಟ್ಟೆ ವಿತರಣೆ
ಇತ್ತೀಚೆಗೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರು ಹಾಗೂ ಮಕ್ಕಳಿಗೆ ಕೊಳೆತ ಮೊಟ್ಟೆ ವಿತರಣೆ ಮಾಡಿರುವ ಘಟನೆ ಬೆಳಕಿಗೆ ಬಂದಿತ್ತು. ಗರ್ಭಿಣಿಯರು ಹಾಗೂ ಮಕ್ಕಳಿಗೆ ಕೆಟ್ಟು ಹೋಗಿರುವ ಕೋಳಿ ಮೊಟ್ಟೆಗಳನ್ನು ವಿತರಣೆ ಮಾಡಲಾಗಿತ್ತು. ಮೊಟ್ಟೆ ಬೇಯಿಸಿ ಸಿಪ್ಪೆ ತೆಗೆದಾಗ ಕೊಳೆತಿದಿರುವುದು ಬೆಳಕಿಗೆ ಬಂದಿತ್ತು.