ಬೆಂಗಳೂರು : ರಾಜ್ಯದಲ್ಲಿ ಆರೋಗ್ಯ ಸಮಸ್ಯೆ ಸುಧಾರಿಸಲು ಮಹತ್ವದ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ 108 ಆರೋಗ್ಯ ಕವಚ ಹಾಗೂ 104 ಆರೋಗ್ಯ ಸಹಾಯವಾಣಿ ಯೋಜನೆಗಳ ಉನ್ನತ್ತೀಕರಣ ಹಾಗು ಮಾರ್ಗದರ್ಶನಕ್ಕೆ ತಾಂತ್ರಿಕ ಸಮಿತಿ ರಚನೆಗೆ ಮುಂದಾಗಿದೆ.
ಇದನ್ನೂ ಓದಿ: ರೈತರಿಗೆ ಹೆಣ್ಣು ಕೊಡದ ಪೋಷಕರು: ಕನ್ಯಾಭಾಗ್ಯ ಯೋಜನೆ ಜಾರಿಗೆ ಆಗ್ರಹಸಿ ಸಿಎಂಗೆ ಪತ್ರ ಬರೆದ ಯುವಕರು
ಡಾ. ಜಿ ಗುರುರಾಜ್, ನಿಮ್ಹಾನ್ಸ್ನ ಪ್ರಭಾರ ನಿರ್ದೇಶಕರು ಹಾಗೂ ಐಐಐಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಮಿತಿ ರಚನೆ ಮಾಡಲಾಗಿದ್ದು, ಈ ಮೂಲಕ ಆರೋಗ್ಯ ಸೇವೆಗಳ ಟೆಂಡರ್ ನ್ಯೂನತೆ ಲೋಪದೋಷ ಅಧ್ಯಯನ ಹಾಗೂ ಸಲಹೆನೀಡಲು ತಜ್ಞರ ಸಲಹಾ ಸಮಿತಿ ರಚನೆ ಮಾಡಲಾಗಿದೆ ಇದರೋಂದಿಗೆ GVK ಸಂಸ್ಥೆಯ ವಿರುದ್ಧ ಸಾಲು ಸಾಲು ಆರೋಪ ಹಾಗೂ ದೂರುಗಳು ಬಂದ ಹಿನ್ನಲೆ ರಾಜ್ಯ ಸರ್ಕಾರ ಜಿವಿಕೆ ಟೆಂಡರ್ ನಿಲ್ಲಿಸಿ GVK ಆಂಬುಲೆನ್ಸ್ ಸೇವೆಗೆ ದೊಡ್ಡ ಶಾಕ್ ಕೊಟ್ಟಂತಾಗಿದೆ.
ಈ ಸಮಿತಿಯಲ್ಲಿರುವ ತಜ್ಞರು ?
ಐಐಐಟಿ ನಿರ್ದೇಶಕರು, ನಿಮ್ಹಾನ್ಸ್ ನಿರ್ದೇಶಕರು, ವಿಟಿಯು ಮಾಜಿ ಕುಲಪತಿಗಳು, ಕಾರ್ಮಿಕ ಇಲಾಖೆಯ ಆಯುಕ್ತರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ( IISC ) ತಜ್ಞರನ್ನ ಈ ಸಮಿತಿಯೊಳಗೊಂಡಿದೆ. ಈ ಸಮಿತಿಯೂ ಟೆಂಡರ್ ಹಾಗೂ ಸೇವಾದಾರರ ಆಯ್ಕೆ ಸಂಬಂಧ ಸಲಹೆ ಮಾರ್ಗದರ್ಶನವನ್ನ ನೀಡಲಿದೆ.